ವೈವಾಹಿಕ ಜೀನವನಕ್ಕೆ ಕಾಲಿಟ್ಟ ಕರ್ನಾಟಕದ ಖ್ಯಾತ ಕ್ರೀಡಾಪಟುಗಳು!
ಭಾರತ ಹಾಕಿ ತಂಡದ ಅಗ್ರ ಫಾರ್ವರ್ಡ್ ಆಟಗಾರ ಕನ್ನಡಿಗ ಎಸ್.ವಿ ಸುನೀಲ್ ಮತ್ತು ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಎಚ್ ಎನ್ ಗಿರೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ...
ಮಂಗಳೂರು/ಹಾಸನ: ಭಾರತ ಹಾಕಿ ತಂಡದ ಅಗ್ರ ಫಾರ್ವರ್ಡ್ ಆಟಗಾರ ಕನ್ನಡಿಗ ಎಸ್.ವಿ ಸುನೀಲ್ ಮತ್ತು ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಎಚ್ ಎನ್ ಗಿರೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಎಸ್.ವಿ ಸುನೀಲ್ ನಿಶಾ ಅವರನ್ನು ವರಿಸಿದರು. ವಿವಾಹ ಸಮಾರಂಭಕ್ಕೆ ಭಾರತ ಹಾಕಿ ತಂಡದ ಹಿರಿಯ ಗೋಲ್ ಕೀಪರ್ ಪಿಆರ್ ಶ್ರೀಜೇಶ್, ಅಂತಾರಾಷ್ಟ್ರೀಯ ಹಾಕಿ ರೆಫ್ರಿ ರಖು ಪ್ರಸಾದ್ ಸೇರಿದಂತೆ ಗಣ್ಯರು ನವದಂಪತಿಗೆ ಶುಭ ಕೋರಿದರು. ಎಸ್.ವಿ ಸುನೀಲ್ ಮತ್ತು ನಿಶಾ ದಂಪತಿಯ ಮದುವೆ ಆರತಕ್ಷತೆ ಕಾರ್ಯಕ್ರಮ ಸೋಮವಾರ ಮಡಿಕೇರಿಯಲ್ಲಿ ನಡೆಯಲಿದೆ.
ಎಚ್ ಎನ್ ಗೀರಿಶ್ ಅವರು ಸಹನಾರೊಂದಿಗೆ ಸಪ್ತಪದಿ ತುಳಿದರು. ಪ್ಯಾರಾ ಅಥ್ಲೀಟ್ ಗಳು ಸೇರಿದಂತೆ ಅನೇಕ ಗಣ್ಯರು ನವಜೋಡಿಗೆ ಶುಭಕೋರಿದರು.
2012ರ ಲಂಡನ್ ಪ್ಯಾರಾಲಿಂಪಿಕ್ಸ್ ನ ಹೈಜಂಪ್ ನಲ್ಲಿ ಗಿರೀಶ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.