ಭಾರತೀಯ ಫುಟ್ ಬಾಲ್ ತಂಡ 
ಕ್ರೀಡೆ

ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತಕ್ಕೆ 99ನೇ ರ್ಯಾಂಕ್; 3 ಸ್ಥಾನಗಳ ಏರಿಕೆ

ಫೆಬ್ರವರಿ ತಿಂಗಳ ಫಿಫಾ(ಫೆಡೆರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ರ್ಯಾಂಕಿಂಗ್ ...

ನವದೆಹಲಿ: ಫೆಬ್ರವರಿ ತಿಂಗಳ ಫಿಫಾ(ಫೆಡೆರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ ಮೂರು ಸ್ಥಾನಗಳ ಏರಿಕೆ ಕಂಡು 99ನೇ ಸ್ಥಾನ ಪಡೆದುಕೊಂಡಿದೆ.

2019ರ ಎಎಫ್ ಸಿ ಏಷಿಯನ್ ಕಪ್ ನಲ್ಲಿ ತರಬೇತುದಾರ ಸ್ಟಿಫನ್ ಕಾನ್ಸ್ಟಂಟಿನ್ ನೇತೃತ್ವದ ಭಾರತೀಯ ಫುಟ್ ಬಾಲ್ ತಂಡ ಕಿರ್ಗಿಜ್ ರಿಪಬ್ಲಿಕ್ ತಂಡದ ಜೊತೆ ಸೆಣಸಲಿದೆ. ಈ ಪಂದ್ಯ ಇದೇ 27ರಂದು ಬಿಶ್ಕೆಕ್ ನ ಡೋಲನ್ ಒಮುರ್ಜಾಕೊವ್ ಕ್ರೀಡಾಂಗಣದಲ್ಲಿ ನಡೆಯಲಿದೆ.
27 ವರ್ಷಗಳ ನಂತರ ಭಾರತೀಯ ಫುಟ್ ಬಾಲ್ ತಂಡ ಈಗಾಗಲೇ ಏಷ್ಯಾ ಕಪ್ ನಲ್ಲಿ ತನ್ನ ಸ್ಥಾನ ಗಳಿಸಿಕೊಂಡಿದೆ. ಕಳೆದ ನವೆಂಬರ್ ನಲ್ಲಿ ನಡೆದ ಎಎಫ್ ಸಿ ಏಷ್ಯಾ ಕಪ್ ಅರ್ಹತಾ ಸುತ್ತಿನ ಗುಂಪು ಎ ಪಂದ್ಯದಲ್ಲಿ ಮ್ಯಾನ್ಮಾರ್ ವಿರುದ್ಧ 2-2 ಡ್ರಾನಲ್ಲಿ ಪಂದ್ಯ ಅಂತ್ಯಗೊಳಿಸಿತ್ತು.

ಫೆಬ್ರವರಿಯ ರೇಟಿಂಗ್ ಪಾಯಿಂಟ್ ನಲ್ಲಿ ಭಾರತ ಆರು ಅಂಕಗಳನ್ನು ಪಡೆದುಕೊಂಡು ಮೂರು ಶ್ರೇಣಿಯಷ್ಟು ಮೇಲೇರಿತು. ಫೆಬ್ರವರಿಯಲ್ಲಿ  ಏಷ್ಯನ್ ಒಕ್ಕೂಟದಲ್ಲಿ 14ನೇ ರ್ಯಾಂಕ್ ಪಡೆದ ಭಾರತ ಒಂದು ಅಂಕಗಳಷ್ಟು ಮುಂದೆ ಹೋಗಿದೆ. ಈ ಪಟ್ಟಿಯಲ್ಲಿ ಇರಾನ್ ಮುಂಚೂಣಿಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bangladesh ಸರ್ಕಾರಿ ಕಚೇರಿಯಲ್ಲಿ ಭಾರತೀಯ ಅಧಿಕಾರಿ ನಿಗೂಢ ಸಾವು, ತನಿಖೆ ಆರಂಭ

Operation Sindoorಗೆ ಪಾಕಿಸ್ತಾನ ತಿರುಗೇಟು; ಭಾರತದ 2 ವಾಯುನೆಲೆ ಧ್ವಂಸ ಅಂತೆ..! ಆದ್ರೆ ಅದು ಅಸ್ತಿತ್ವದಲ್ಲೇ ಇಲ್ಲ..!

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

SCROLL FOR NEXT