ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್: ಹೆಚ್ಚುವರಿ ಅಧಿಕಾರಿಗಳಿಗೆ ಐಒಎಯಿಂದ ಪಾವತಿಯಿಲ್ಲ

Sumana Upadhyaya

ನವದೆಹಲಿ: ಭಾರತೀಯ ಕಾಮಲ್ ವೆಲ್ತ್ ಗೇಮ್ಸ್ ಕಾಂಟಿಂಜೆಂಟ್ ಗೋಲ್ಡ್ ಕೋಸ್ಟ್ ಭಾಗವಾಗಿರುವ ಹೆಚ್ಚುವರಿ ಅಧಿಕಾರಿಗಳ ವೆಚ್ಚವನ್ನು ವೈಯಕ್ತಿಕ ಕ್ರೀಡೆ ಒಕ್ಕೂಟ ಭರಿಸಲಿದ್ದು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಲ್ಲ ಎಂದು ಕಾಮನ್ವೆಲ್ತ್ ಗೇಮ್ಸ್ ಮಿಷನ್ ನ ಮುಖ್ಯಸ್ಥ ವಿಕ್ರಮ್ ಸಿಸೋಡಿಯಾ ತಿಳಿಸಿದ್ದಾರೆ.

ಕಾಮನ್ ವೆಲ್ತ್ ಗೇಮ್ಸ್ ಕಾಂಟಿಂಜೆಂಟ್ ನಲ್ಲಿ 222 ಕ್ರೀಡಾಳುಗಳಿದ್ದು , 88 ಅಧಿಕಾರಿಗಳು ಮತ್ತು 26 ಹೆಚ್ಚುವರಿ ತಂಡದ ಅಧಿಕಾರಿಗಳು ಇರುತ್ತಾರೆ ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದರು.

ಅಧಿಕೃತ ಸಿಡಬ್ಲ್ಯುಜಿ ಫೆಡರೇಶನ್ ನಿಯಮ ಪ್ರಕಾರ, ಹೆಚ್ಚುವರಿ ತಂಡ ಅಧಿಕಾರಿಗಳು ಆಟಗಾರರ ಜೊತೆ ಇರಲು ಅವಕಾಶವಿರುತ್ತದೆ, ಆದರೆ ಅವರ ವೆಚ್ಚವನ್ನು ವೈಯಕ್ತಿಕ ಒಕ್ಕೂಟ ಭರಿಸುತ್ತದೆಯೇ ಹೊರತು ಐಒಎ ಅಲ್ಲ ಎಂದು ಹೇಳಿದರು.

ಒಕ್ಕೂಟ ಅಥ್ಲೆಟ್ ಗಳ ಪೋಷಕರನ್ನು ಕೋಚ್ ಗಳನ್ನಾಗಿ ಕಳುಹಿಸಿದರೆ ಅವರ ವೆಚ್ಚವನ್ನು ಕೂಡ ಒಕ್ಕೂಟವೇ ನೋಡಿಕೊಳ್ಳುತ್ತದೆ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ 222 ಅಥ್ಲೆಟ್ ಗಳು, 106 ಅಧಿಕಾರಿಗಳ ಹೆಸರುಗಳನ್ನು ಅನುಮೋದನೆಗಾಗಿ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಬಳಿಗೆ ಕಳುಹಿಸಿದೆ.

ವರದಿ ಪ್ರಕಾರ, ಕ್ರೀಡಾ ಸಚಿವಾಲಯ ಈ ಹಿಂದೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಗೆ ಆದೇಶ ನೀಡಿ, ಸಿಡಬ್ಲ್ಯುಜಿ ಕಾಂಟಿಂಜೆಂಟ್ ಪ್ರಮಾಣದಲ್ಲಿ ಕಠಿಣ ಕ್ರಮವನ್ನು ಅನುಸರಿಸುತ್ತಿದ್ದು ಕ್ರೀಡಾ ಸ್ಪರ್ಧಿಗಳ ಕುಟುಂಬ ಸದಸ್ಯರು ಅವರೊಂದಿಗೆ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು.

2018ನೇ ಸಾಲಿನ ಕಾಮನ್ ವೆಲ್ತ್ ಗೇಮ್ ಆಸ್ತ್ರೇಲಿಯಾದ ಗೋಲ್ಡ್ ಕೋಸ್ಟ್ ಸಿಟಿಯಲ್ಲಿ ಏಪ್ರಿಲ್ 4ರಿಂದ 15ರವರೆಗೆ ನಡೆಯಲಿದೆ.

SCROLL FOR NEXT