ಆಂಧ್ರ ಪ್ರದೇಶ ಉಪ ಕಲೆಕ್ಟರ್ ಹುದ್ದೆಗೇರಿದ ಶೆಟ್ಲರ್ ಕಿಡಂಬಿ ಶ್ರೀಕಾಂತ್ 
ಕ್ರೀಡೆ

ಆಂಧ್ರ ಪ್ರದೇಶ: ಶಟ್ಲರ್ ಕಿಡಂಬಿ ಶ್ರೀಕಾಂತ್ ಗೆ ಉಪ ಕಲೆಕ್ಟರ್ ಹುದ್ದೆ

ಭಾರತದ ಖ್ಯಾತ ಶಟಲ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಆಂಧ್ರ ಪ್ರದೇಶ ಸರ್ಕಾರ ಉಪ ಕಲೆಕ್ಟರ್ ಆಗಿ ನೇಮಕಗೊಳಿಸಿ ಆದೇಶಿಸಿದೆ.

ಅಮರಾವತಿ (ಆಂಧ್ರ ಪ್ರದೇಶ): ಭಾರತದ ಖ್ಯಾತ ಶಟಲ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಆಂಧ್ರ ಪ್ರದೇಶ ಸರ್ಕಾರ  ಉಪ ಕಲೆಕ್ಟರ್ ಆಗಿ ನೇಮಕಗೊಳಿಸಿ ಆದೇಶಿಸಿದೆ.
ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಹಾಗೂ ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೆಲೆ ಗೋಪಿಚಂದ್.ಸಮ್ಮುಖದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು  ಶ್ರೀಕಾಂತ್ ಅವರಿಗೆ ನೇಮಕಾತಿ ಆದೇಶವನ್ನು ಹಸ್ತಾಂತರಿಸಿದ್ದಾರೆ.
ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರದಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಕ್ಕಾಗಿ ಶ್ರೀಕಾಂತ್ ಅವರನ್ನು  ನಾಯ್ಡು ಅಭಿನಂದಿಸಿದ್ದಾರೆ.
ಕಳೆದ ವರ್ಷ ಇಂಡೋನೇಷಿಯಾ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್ ಅವರನ್ನು ಸನ್ಮಾನಿಸಿದ್ದ ಮುಖ್ಯಮಂತ್ರಿ, ಶ್ರೀಕಾಂತ್ ಅವರಿಗೆ ಸರ್ಕಾರಿ ಕೆಲಸದ ಭರವಸೆ ನೀಡಿದ್ದರು.
ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಪಿ.ವಿ. ಸಿಂಧು ಅವರ ಬಳಿಕ ಪದ್ಮಶ್ರೀ ಪುರಸ್ಕಾರ ಪಡೆದ ಎರಡನೇ ಅತಿ ಕಿರಿಯ ಕ್ರೀಡಾಳು ಕಿಡಂಬಿ ಶ್ರೀಕಾಂತ್ ಅವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ, 'ದುಬಾರಿ' ಪಟ್ಟಿ ಇಲ್ಲಿದೆ!

'OP Sindoor ನಲ್ಲಿ ಪಾಕಿಸ್ತಾನಕ್ಕೆ ಅಭೂತಪೂರ್ವ ಜಯ': ಪಾಕ್ ಪ್ರಧಾನಿ ಹೇಳಿಕೆಗೆ ಮುಸಿ ಮುಸಿ ನಕ್ಕ ಭಾರತದ ಪ್ರತಿನಿಧಿ! Video

ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ 28 ವರ್ಷಗಳ ಹಳೆಯ ಅಜರುದ್ದೀನ್ ದಾಖಲೆ ಮುರಿದ Virat Kohli!

ಸಿನಿಮಾವನ್ನೇ ಮೀರಿಸುವ ಘಟನೆ: ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸ್‌, 40 ಕಿ.ಮೀ. ಬೆನ್ನಟ್ಟಿ ಗುಟ್ಕಾ ಸ್ಮಗ್ಲರ್ ಗಳ ಬಂಧನ! Video