ಹರೇಂದ್ರ ಸಿಂಗ್ 
ಕ್ರೀಡೆ

ಹಾಕಿ: ಪುರುಷರ ತಂಡದ ಕೋಚ್ ಆಗಿ ಹರೇಂದ್ರ ಸಿಂಗ್, ಮಹಿಳಾ ತಂಡಕ್ಕೆ ಜೋರ್ಡ್ ಮರಿಜ್ನೆ ನೇಮಕ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದ ಹರೇಂದ್ರ ಸಿಂಗ್ ಅವರಿಂದು ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ನೇಮಕವಾಗಿದ್ದಾರೆ.

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಿಳಾ ಹಾಕಿ ತಂಡದ ಕೋಚ್ ಆಗಿದ್ದ ಹರೇಂದ್ರ ಸಿಂಗ್ ಅವರಿಂದು ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರರಾಗಿ ನೇಮಕವಾಗಿದ್ದಾರೆ. ಜೋರ್ಡ್ ಮರಿಜ್ನೆ ಅವರನ್ನು ಮಹಿಳಾ ತಂಡದ ತರಬೇತುದಾರರನ್ನಾಗಿ ಬದಲಿಸಲಾಗಿದೆ.
ಇತ್ತೀಚಿನ ಕಾಮನ್ವೆಲ್ತ್ ಕೂಟದಲ್ಲಿ ಮನ್ ಪ್ರೀತ್ ಸಿಂಗ್ ತಂಡದ ಕಳಪೆ ಪ್ರದರ್ಶನದ ಪರಿಣಾಮ ಈ ಬದಲಾವಣೆ ಮಾಡಲಾಗಿದೆ.
2009ರಿಂದ 2011ರವರೆಗೆ ಭಾರತೀಯ ಪುರುಷರ ತಂಡಕ್ಕೆ ತರಬೇತಿ ನೀಡಿದ್ದ ಹರೇಂದ್ರ , ಕಳೆದ ವರ್ಷದ ನವೆಂಬರ್ ನಿಂದ ಮಹಿಳಾ ತಂಡದ ಉಸ್ತುವಾರಿ ವಹಿಸಿಕೊಂಡಿದ್ದರು.
2016 ರಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವನ್ನು ವಿಶ್ವ ಕಪ್ ಸರಣಿಯಲ್ಲಿ ಮುನ್ನಡೆಸಿದ್ದ ಹರೇಂದ್ರ ಮಾರ್ಗದರ್ಶ್ನದಲ್ಲಿ ರತೀಯ ಮಹಿಳಾ ತಂಡವು ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕನೇ ಶ್ರೇಯಾಂಕವನ್ನು ಗಳಿಸಿತ್ತು.  ಕಳೆದ ವರ್ಷ ಜಪಾನ್ ನಲ್ಲಿ ನಡೆದ ಒಂಭತ್ತನೇ ಮಹಿಳಾ ಏಷ್ಯಾ ಕಪ್ ಸರಣಿಗೆ ಮಹಿಳಾ ತಂಡಕ್ಕೆ ಮಾರ್ಗದರ್ಶನ ನಿಡಿದ್ದು ಇದೇ ಹರೇಂದ್ರ ಎನ್ನುವುದು ಗಮನಾರ್ಹ ಅಂಶ.
ಮರಿಜ್ನೆ ಮಾರ್ಗದರ್ಶನದಲ್ಲಿ ಮುನ್ನಡೆದಿದ್ದ ಪುರುಷರ ಹಾಕಿ ಪಡೆ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಐದನೇ ಸ್ಥಾನ ಗಳಿಸುವುದರೊಡನೆ ನಿರಾಶೆ ಅನುಬವಿಸಿತ್ತು.. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT