ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಸಾನಿಯಾ ಮಿರ್ಜಾ ಫೋಟೋ ವೈರಲ್!
ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡುಮಗುವಿಗೆ ಜನ್ಮವಿತ್ತಿದ್ದಾರೆ. ನವಜಾತ ಶಿಶುವಿಗೆ ಶೋಯೆಬ್ ಮಲಿಕ್ ಸಾನಿಯಾ ದಂಪತಿ, ಇಜ್ಹಾನ್ ಮಿರ್ಜಾ ಮಲಿಕ್ ...
ನವದೆಹಲಿ: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡುಮಗುವಿಗೆ ಜನ್ಮವಿತ್ತಿದ್ದಾರೆ. ನವಜಾತ ಶಿಶುವಿಗೆ ಶೋಯೆಬ್ ಮಲಿಕ್ ಸಾನಿಯಾ ದಂಪತಿ, ಇಜ್ಹಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ. ಅರೇಬಿಕ್ ದೇವರು ಎಂಬುದು ಇದರ ಅರ್ಥ.
ಶೋಯೆಬ್ ಮಲಿಕ್ ತಮ್ಮ ಇನ್ಸ್ ಸ್ಟಾ ಗ್ರಾಮ್ ನಲ್ಲಿ ಸಾನಿಯಾ ಮಿರ್ಜಾ ತನ್ನ ಮಗುವಿನೊಂದಿಗೆ ಇರುವ ಫೋಟೋ ಶೇರ್ ಮಾಡಿದ್ದು, ಫೋಟೋ ವೈರಲ್ ಆಗಿದೆ.
ಆಸ್ಪತ್ರೆಯಿಂದ ಹೊರ ಬಂದಿರುವ ಸಾನಿಯಾ, ಪುತ್ರ ಇಜ್ಹಾನ್ ನನ್ನು ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದೆ,
ಕಪ್ಪು ಲೆಗ್ಗಿಂಗ್ ಹಾಗೂ ಬ್ಲ್ಯಾಕ್ ಅಂಡ್ ವೈಟ್ ಚೆಕ್ಸ್ ಕುರ್ತಾ ಧರಿಸಿರುವ ಸಾನಿಯಾ, ಕಿತ್ತಳೆ ಬಣ್ಣದ ಸ್ಕ್ರಾಪ್ ಸುತ್ತಿಕೊಂಡು, ಬ್ಲಾಂಕೆಟ್ ನಲ್ಲಿ ಮಗುವನ್ನು ಸುತ್ತಿಕೊಂಡಿರುವ ಫೋಟೋ ಇದಾಗಿದೆ.
ಸಾನಿಯಾ ಆಪ್ತೆ ಫರಾ ಖಾನ್ ಮೊತ್ತ ಮೊದಲಿಗೆ ಸಾನಿಯಾ ದಂಪತಿಗೆ ಗಂಡು ಮಗು ಜನಿಸಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು.