ಕ್ರೀಡೆ

ಸೂಪರ್ ಸ್ಟಾರ್ ರಜನಿಕಾಂತ್ ರನ್ನು ಭೇಟಿಯಾದ ಬಾಕ್ಸಿಂಗ್ ತಾರೆ ಮೇರಿ ಕೋಮ್!

Raghavendra Adiga
ಚೆನ್ನೈ: ಐದು ಬಾರಿಯ ಬಾಕ್ಸಿಂಗ್ ಚಾಂಪಿಯನ್ ಭಾರತದ ಹೆಮ್ಮೆಯ ಮೇರಿ ಕೋಮ್ ಶುಕ್ರವಾರ ಚೆನ್ನೈನ ಪೋಸ್ ಗಾರ್ಡನ್ ನಿವಾಸದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದಾರೆ.
ಲತಾ ರಜನಿಕಾಂತ್ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೇರಿ ಕೋಮ್ ಚೆನ್ನೈಗೆ ಆಗಮಿಸಿದ್ದರು. 
ತಾವು ಸೂಪರ್ ಸ್ಟಾರ್ ರಜನಿಕಾಂತ್ ಅವರೊಡನೆ ತೆಗೆಸಿಕೊಂಡ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಮೇರಿ ಕೋಮ್ "ಕಾಲಿವುಡ್ ಸೇರಿ ದಕ್ಷಿಣ ಭಾರತ ಚಿತ್ರರಂಗದ ದಂತಕಥೆ, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾದ ಕ್ಷಣ, ಇದು ಬಹಳ ಸಂಭ್ರಮ ಹಾಗೂ ಅಚ್ಚರಿದಾಯಕ ಭೇಟಿ" ಎಂದು ಬರೆದುಕೊಂಡಿದ್ದಾರೆ.
ಇದಾಗಲೇ ರಜನಿ ತಮ್ಮ ಮುಂದಿನ ಚಿತ್ರ "ಪೆಟ್ಟಾ" ಚಿತ್ರೀಕರಣ ಮುಗಿಸಿದ್ದಾರೆ. ಶಂಕರ್ ನಿರ್ದೇಶನದ  "2.0" ಸಹ ಇದೇ ತಿಂಗಳ 29ಕ್ಕೆ ತೆರೆ ಕಾಣಲಿದೆ.
ಮುಂಬರುವ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ​​(ಎಐಬಿಎ) ವುಮೆನ್ ವರ್ಲ್ಡ್ ಚಾಂಪಿಯನ್ ಶಿಪ್ ನ ಬ್ರ್ಯಾಂಡ್ ಅಂಬಾಸಿಡರ್ (ಪ್ರಚಾರ ರಾಯಭಾರಿ) ಆಗಿ ಮೇರಿ ಕೋಮ್ ಆಯ್ಕೆಯಾಗಿದ್ದಾರೆ.
SCROLL FOR NEXT