ಲಂಡನ್: ಭಾರತದಂತಹ 'ಕಳಪೆ ಸ್ಥಳ'ದಲ್ಲಿ ಫಾರ್ಮುಲಾ ಒನ್ ಕಾರ್ ರೇಸ್ ಅನ್ನು ಏಕೆ ಆಯೋಜಿಸಲಾಗುತ್ತಿದೆ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದಿರುವ ಐದು ಬಾರಿ ವಿಶ್ವ ಚಾಂಪಿಯನ್ ಕಾರು ಚಾಲಕ ಲೆವಿಸ್ ಹ್ಯಾಮಿಲ್ಟನ್ ಅವರು, ಭಾರತ ಫಾರ್ಮುಲಾ ಒನ್ ಆಯೋಜಿಸುವ ಬದಲು ಹೆಚ್ಚು ಹೆಚ್ಚು ಮನೆ ಮತ್ತು ಶಾಲೆಗಳನ್ನು ನಿರ್ಮಿಸಬಹುದಿತ್ತು ಎಂದು ಹೇಳಿದ್ದಾರೆ.
ಭಾರತ, ಕೋರಿಯಾ ಮತ್ತು ಟರ್ಕಿಯಂತಹ ದೇಶಗಳಲ್ಲಿ ಫಾರ್ಮುಲಾ ಒನ್ ರೇಸ್ ಆಯೋಜಿಸುತ್ತಿರುವುದನ್ನು ಪ್ರಶ್ನಿಸಿರುವ ಹ್ಯಾಮಿಲ್ಟನ್, ಹೊಸ ದೇಶಗಳಲ್ಲಿ ಏಫ್ ಒನ್ ರೇಸ್ ಆಯೋಜಿಸುವುದು ಅಷ್ಟೊಂದು ಸರಿಯಲ್ಲ. ಆಡಲು ಸೂಕ್ತ ಎನಿಸುವ ದೇಶಗಳಲ್ಲಿ ಈ ಆಟವನ್ನು ಆಯೋಜಿಸಿದರೆ ಸೂಕ್ತ. ಅಷ್ಟೇ ಅಲ್ಲದೆ ಹೊಸ ದೇಶಗಳಲ್ಲಿ ಕಾರ್ ರೇಸ್ ಅನ್ನು ಆಯೋಜನೆ ಮಾಡುವ ಅಗತ್ಯವೂ ಇಲ್ಲ' ಎಂದು ಹೇಳಿದ್ದಾರೆ.
ಕಾರ್ ರೇಸ್ ಗೆ ಸಂಬಂಧಿಸಿದಂತೆ ಭಾರತದ ವಿರುದ್ಧದ ನನ್ನ ಹೇಳಿಕೆಗೆ ಹಲವರು ಅಸಮಧಾನಗೊಳ್ಳಬಹುದು. ಆದರೆ ಭಾರತ ಒಂದು ಸುಂದರ ಸ್ಥಳ. ಅಲ್ಲಿನ ಸಂಸ್ಕೃತಿ ಅದ್ಭುತ ಮತ್ತು ಅದೊಂದು ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ. ಅಲ್ಲಿ ಅಷ್ಟೇ ಬಡತನವೂ ಇದೆ. ಹೀಗಾಗಿ ಫಾರ್ಮುಲಾ ಒನ್ ಟ್ರಾಕ್ ನಿರ್ಮಿಸುವ ಹಣವನ್ನು ಶಾಲೆ ಮತ್ತು ಮನೆ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ಹ್ಯಾಮಿಲ್ಟನ್ ಅಭಿಪ್ರಾಯಪಟ್ಟಿದ್ದಾರೆ.
ನಿಜವಾದ ರೇಸಿಂಗ್ ಆಟ ಎಂದರೆ ಇಂಗ್ಲೆಂಡ್, ಜರ್ಮನಿ, ಇಟಲಿಯಲ್ಲಿ ಅದ್ಭುತವಾಗಿರುತ್ತದೆ. ಇಲ್ಲಿನ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಬಹುದು. ಇಲ್ಲಿ ನಾವು ಸಾಕಷ್ಟು ದಾಖಲೆಗಳನ್ನೂ ನಿರ್ಮಿಸಿದ್ದೇವೆ. ಆದರೆ ಈ ದೇಶಗಳಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಆಡಲು ಅವಕಾಶ ನೀಡುತ್ತಾರೆ. ಎಲ್ಲಾದರು ಆ ಅಧಿಕಾರ ಅದು ನನಗಿರುತ್ತಿದ್ದರೆ ಹೆಚ್ಚು ಬಾರಿ ಆಡಿಸುತ್ತಿದ್ದೆ' ಎಂದಿದ್ದಾರೆ.
ಭಾರತ ಒಂದು ಕಳಪೆ ಸ್ಥಳ. ಅಲ್ಲಿ ಮಧ್ಯದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ರೇಸ್ ಆಯೋಜಿಸಿದ್ದರು. ನನಗೆ ಆ ರೇಸ್ ಆಡಲು ವಿಚಿತ್ರ ಎನಿಸಿತು' ಎಂಬ ಮಾತುಗಳನ್ನು ಹೇಳಿದ್ದಾರೆ.
2011, 2012 ಮತ್ತು 2013 ರಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಭಾರತ ಫಾರ್ಮುಲಾ ಒನ್ ಸ್ಪರ್ಧೆಯನ್ನು ಆಯೋಜಿಸಿತ್ತು ಆದರೆ ಇದಾದ ನಂತರ ಈ ಸ್ಥಳವನ್ನು ಅಂತಿಮವಾಗಿ ಎಫ್ಐಎ ಮತ್ತು ರಾಜ್ಯ ಸರ್ಕಾರಗಳ ನಡುವಿನ ತೆರಿಗೆ-ಸಂಬಂಧಿತ ವಿವಾದದ ಕಾರಣದಿಂದಾಗಿ ಸ್ಪರ್ಧೆಯನ್ನು ಅಂತಿಮವಾಗಿ ಕೈಬಿಡಲಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos