ಕ್ರೀಡೆ

ಯುನಿಸೆಫ್ ಭಾರತೀಯ ಯುವ ರಾಯಭಾರಿಯಾಗಿ ಹಿಮಾ ದಾಸ್ ನೇಮಕ!

Raghavendra Adiga
ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ 4x400 ಮೀ ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಸೇರಿದಂತೆ ಮೂರು ಪದಕಗಳನ್ನು ಗೆದ್ದ ಭಾರತದ ಹೆಮ್ಮೆಯ ಅಥ್ಲೀಟ್ ಹಿಮಾ ದಾಸ್ ಯುನಿಸೆಫ್ ನ ಭಾರತದ ಪ್ರಪ್ರಥಮ ಯುವ ರಾಯಭಾರಿಯಾಗಿ ನೇಮಕವಾಗಿದ್ದಾರೆ.
"ಬಾಲ್ಯದಲ್ಲಿ ಸಚಿನ್ ತೆಂಡೂಲ್ಕರ್ ನನ್ನ ರೋಲ್ ಮಾಡಲ್ ಆಗಿದ್ದರು.. ಈಗ ನಾನು ಅವರ ಹೆಜ್ಜೆಗಳನ್ನೇ ಅನುಸರಿಸಿ ಯುನಿಸೆಫ್ ನ ರಾಯಭಾರಿಯಾಗಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಚಾರ. ಪ್ರತಿ ಮಗುವೂ ಅದಾವುದೇ ಹಿನ್ನೆಲೆ, ಲಿಂಗ, ಜಾತಿ ತಾರ್ತಮ್ಯವಿಲ್ಲದೆ ಸುರಕ್ಷಿತ ಹಾಗೂ ಉತ್ತಮ ಶಿಕ್ಷಣ ನೀಡುವ ಶಾಲೆಗಳನ್ನು ಸೇರಿಕೊಳ್ಳಲು ಸಾಧ್ಯವಾಗಬೇಕುಇದರಿಂದ ಅವರು ಉತ್ತಮ ವಿದ್ಯಾಭ್ಯಾಸ ಪಡೆದು ಏಳಿಗೆಯಾಗಬಹುದು" ಹಿಮಾ ದಾಸ್ ಹೇಳಿದ್ದಾರೆ.
ಹಿಮಾ ಅವರನ್ನು ಯುವ ರಾಯಭಾರಿಯನ್ನಾಗಿಸಿದ ಯುನಿಸೆಫ್ ಈ ಸಂಬಂಧ ತನ್ನ ಟ್ವೀಟ್ ಖಾತೆಯಲ್ಲಿ ಬರೆದಿದ್ದು " ಇವರೇ ನಮ್ಮ ಭಾರತದ ಪ್ರಪ್ರಥಮ ಯುವ ರಾಯಭಾರಿ" ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮಕ್ಕಳ ದಿನಾಚರಣೆಯಾದ ಬುಧವಾರ ಯುನಿಸೆಫ್ ಈ ಆಯ್ಕೆ ಮಾಡಿರುವುದು ಗಮನಾರ್ಹ.
ಕಳೆದ ಜುಲೈನಲ್ಲಿ ಫಿನ್ ಲ್ಯಾಂಡಿನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ  ಹಿಮಾ ದಾಸ್ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದರು.
ಅಸ್ಸಾಂನ ನಾಗೋನ್ ಜಿಲ್ಲೆಯವರಾದ ಹಿಮಾ ದಾಸ್ ಕೃಷಿಕ ಕುಟುಂಬದ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ.ತಮ್ಮ ಮಿಂಚಿನಂತಹಾ ಓಟದಿಂದ ಅವರು ಭಾರತೀಯರ ಹೃದಯ ಗೆದ್ದಿದ್ದಾರೆ.
SCROLL FOR NEXT