ಕ್ರೀಡೆ

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಅಂತಿಮ ಸುತ್ತಿಗೆ ಮೇರಿ ಕೋಮ್

Raghavendra Adiga
ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಗುರುವಾರ ಮೇರಿ ಕೋಮ್ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
48 ಕೆಜಿ ವಿಭಾಗದ ಸೆಮಿ ಫೈನಲ್ಸ್ ನಲ್ಲಿ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಪರಾಜಿತಗೊಳಿಸಿದ ಭಾರತದ ಪ್ರಖ್ಯಾತ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ ಫೈನಲ್ಸ್ ಪ್ರವೇಶಿಸಿದ್ದಾರೆ. ಒಂದೊಮ್ಮೆ ಫೈನಲ್ ನಲ್ಲಿ ಮೇರಿ ವಿಜೇತರಾದರೆ ಆರನೇ ಬಾರಿ ಚಿನ್ನದ ಪದಕಕ್ಕೆ ಅವರು ಕೊರಳೊಡ್ಡುವವರಿದ್ದಾರೆ.
ಇದಕ್ಕೆ ಹಿಂದೆ ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಡನೆ ಮೇರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದ್ದರು..
SCROLL FOR NEXT