ನವದೆಹಲಿ: ಬಿಹಾರದ ಮೊಹಮ್ಮದ್ ಮುಸ್ತಾಕ್ ಅಹ್ಮದ್ ಹಾಕಿ ಇಂಡಿಯಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಅಧ್ಯಕ್ಷ ರಾಜಿಂದರ್ ಸಿಂಗ್ ಅವರ ಅಧಿಕಾರವಧಿ ಇಂದು ಕೊನೆಗೊಂಡಿದ್ದು, ಮೊಹಮ್ಮದ್ ಮುಸ್ತಾಕ್ ಅಹ್ಮದ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಮಧ್ಯೆ ಮಣಿಪುರದ ಹಾಕಿ ಮಂಡಳಿಯ ಜ್ಞಾನೇಂದ್ರ ನಿಂಗೊಂಬಾಮ್ ಹಿರಿಯ ಉಪಾಧ್ಯಕ್ಷರಾಗಿ, ಜಮ್ಮು ಮತ್ತು ಕಾಶ್ಮೀರದ ಅಸಿಮಾ ಆಲಿ ಮತ್ತು ಜಾರ್ಖಂಡ್ ನ ಬೊಲಾ ನಾಥ್ ಸಿಂಗ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಜಮ್ಮು- ಕಾಶ್ಮೀರದ ರಾಜಿಂದರ್ ಸಿಂಗ್ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದು. ತಪನ್ ಕುಮಾರ್ ದಾಸ್ ಖಜಾಂಚಿಯಾಗಿ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.
ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಸುಂತಾ ಲೊಕ್ರಾ ಹಾಗೂ ಫಿರೋಜ್ ಅನ್ಸಾರಿ ಜಂಟಿ ಕಾರ್ಯದರ್ಶಿ ಹೊಣೆ ಹೊತ್ತಿದ್ದಾರೆ. ಕರ್ನಾಟಕದ ಎಸ್. ವಿ.ಎಸ್. ಸುಬ್ರಹ್ಮಣ್ಯ ಗುಪ್ತ ಕಾರ್ಯಕಾರಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.