ಕ್ರೀಡೆ

ಏಷ್ಯನ್ ಪ್ಯಾರಾ ಗೇಮ್ಸ್: ಚಿನ್ನಕ್ಕೆ ಗುರಿಯಿಟ್ಟ ಬಿಲ್ಲುಗಾರ ಹರ್ವಿಂದರ್ ಸಿಂಗ್

Raghavendra Adiga
ಜಕಾರ್ತಾ: ಏಷ್ಯನ್ ಪ್ಯಾರಾ ಗೇಮ್ಸ್ ನ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಹರ್ವಿಂದರ್ ಸಿಂಗ್ ವಿನ್ನದ ಪದಕ ಗಳಿಸಿದ್ದಾರೆ. ಹರ್ವಿಂದರ್ ವೈಯುಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.
ಇನ್ನು ಬುಧವಾರದ ಸ್ಪರ್ಧೆಗಳಲ್ಲಿ ಭಾರತದ ಡಿಸ್ಕಸ್ ಥ್ರೋ ಎಸೆತಗಾರ ಮೋನು ಘಂಗೋಸ್ F11 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರೆ ಪುರುಷರ ಶಾಟ್ ಪುಟ್ F46 ವಿಭಾಗದಲ್ಲಿ ಭಾರತದ ಮೊಹಮ್ಮದ್ ಯಾಸಿರ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಹರ್ವಿಂದರ್ ಚೀನಾದ ಝಾವೋ ಲಿಕ್ಸೋ ಅವರನ್ನು W2 / ST ವರ್ಗದಲ್ಲಿ 6-0 ಅಂತರದಿಂದ ಮಣಿಸಿ ಸ್ವರ್ಣ ಪದಕ ವಿಜೇತರಾದರು. ಈ ಮುಖೇನ ಭಾರತ ಪ್ರಸಕ್ತ ಕ್ರೀಡಾಕೂಟದಲ್ಲಿ ಏಳು ಚಿನ್ನದ ಪದಕ ಗಳಿಸಿದಂತಾಗಿದೆ.
ಟ್ರ್ಯಾಕ್ಆಂಡ್ ಫೀಲ್ಡ್ ಇವೆಂಟ್ ನಲ್ಲಿ ಭಾರತದ ಡಿಸ್ಕಸ್ ಎಸೆತಗಾರ ಮೋನು 35.89 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ರಜತ ಪದಕ ಗಳಿಸಿದ್ದರು. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಶಾಟ್ ಪುಟ್ ನಲ್ಲಿ ಮೊಹಮ್ಮದ್ ಯಾಸಿರ್ 14.22 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆಯುವ ಮೂಲಕ ಕಂಚು ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಚೀನಾ ದೇಶದ ಆಟಗಾರ ಚಿನ್ನ ಗೆದ್ದರೆ ಕಜಕಿಸ್ಥಾನ ಸ್ಪರ್ಧಿ ರಜತ ಪದಕ ಜಯಿಸಿದಾರೆ.
SCROLL FOR NEXT