ಅನಿಲ್ ಕುಮಾರ್, 
ಕ್ರೀಡೆ

ಏಷ್ಯನ್ ಪ್ಯಾರಾ ಗೇಮ್ಸ್: ಗಡಿ ಕಾಯುವಾಗ ಕಾಲು ಕಳೆದುಕೊಂಡ ಯೋಧನಿಗೆ ಕಂಚು!

ಹಿಮಾಲಯದ ಅತ್ಯಂತ ಕಠಿಣ ವಾತಾವರಣದಲ್ಲಿ ಸೇವೆ ಸಲ್ಲಿಸುವಾಗಲೇ ತನ್ನ ಕಾಲನ್ನು ಕಳೆದುಕೊಂಡಿದ್ದ ಯೋಧ ಲ್ಯಾನ್ಸ್ ಹವಿಲ್ದಾರ್ ಅನೀಶ್ ಕುಮಾರ್ ಎಸ್, ಇದೀಗ ಇಂಡೋನೇಷಿಯಾ ಜಕಾರ್ತಾದಲ್ಲಿ....

ಜಕಾರ್ತಾ: ಹಿಮಾಲಯದ ಅತ್ಯಂತ ಕಠಿಣ ವಾತಾವರಣದಲ್ಲಿ ಸೇವೆ ಸಲ್ಲಿಸುವಾಗಲೇ ತನ್ನ ಕಾಲನ್ನು ಕಳೆದುಕೊಂಡಿದ್ದ ಯೋಧ ಲ್ಯಾನ್ಸ್ ಹವಿಲ್ದಾರ್ ಅನೀಶ್ ಕುಮಾರ್ ಎಸ್, ಇದೀಗ ಇಂಡೋನೇಷಿಯಾ ಜಕಾರ್ತಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಡಿಸ್ಕಸ್ ಎಸೆತದಲ್ಲಿ ಕಂಚಿನ ಪದಕ ಗಳಿಸಿ ಭಾರತದ ಕೀರ್ತಿ ಹೆಚ್ಚಿಸಿದಾರೆ.
ಜಮ್ಮು ಕಾಶ್ಮೀರದ ಅತ್ಯಂತ ಕಠಿಣ ವಾತಾವರಣವಿರುವ ಗಡಿ ಪ್ರದೇಶದಲ್ಲಿ ಕಾವಲಿದ್ದ ವೇಳೆ ಹಿಮದಡಿ ಕಾಲು ಸಿಕ್ಕಿಹಾಕಿಕೊಂಡ ಕಾರಣ ತಮ್ಮ ಕಾಲನ್ನು ಕಳೆದುಕೊಂಡಿದ್ದ ಅನಿಲ್ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ F/44 ವಿಭಾಗದಲ್ಲಿ ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ.
45.41 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಅನಿಲ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಕಠಿಣ ತರಬೇತಿ ಬಳಿಕ ಪ್ಯಾರಾ ಏಷ್ಯನ್ ಗೇಮ್ಸ್ ಗೆ ತೆರಳಿದ್ದ ಅನಿಲ್ ಗೆ ಹೀಗೆ ತೆರಳುವ ಮುನ್ನ ಇನ್ನೊಂದು ಸಂಕಷ್ಟವಊ ಎದುರಾಗಿತ್ತು. ಇತ್ತೀಚೆಗೆ ಕೇರಳದಲ್ಲಿ ಸುರಿದ ಮಹಾಮಳೆಯಲ್ಲಿ ಇವರ ತಾಯಿ ಸಿಕ್ಕಿಹಾಕಿಕೊಂಡಿದ್ದರು.ರಕ್ಷಣಾ ಪಡೆಗಳ ಕಾರ್ಯಾಚರಣೆ ಪರಿಣಾಮ ತಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. 
ಹೀಗೆ ನಾನಾ ಸಂಕಷ್ಟಗಳನ್ನು ಎದುರಿಸಿದ ಬಳಿಕ ಭಾರತಕ್ಕೆ ಕಂಚಿನ ಪದಕ ಗಳಿಸಿಕೊಟ್ಟಿರುವ ಅನಿಲ್ ಕುಮಾರ್ ಅವರಿಗೆ ನಾವೂ ಹ್ಯಾಟ್ಸ್ ಆಫ್ ಹೇಳೋಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT