ಕ್ರೀಡೆ

ಡೆನ್ಮಾರ್ಕ್ ಓಪನ್: ಕಠಿಣ ಪಂದ್ಯ ಗೆದ್ದ ಸೈನಾ ದ್ವಿತೀಯ ಸುತ್ತಿಗೆ, ಆಘಾತಕಾರಿ ಸೋಲು ಕಂಡ ಸಿಂಧೂ ಹೊರಕ್ಕೆ

Raghavendra Adiga
ಓಡನ್ಸ್(ಡೆನ್ಮಾರ್ಕ್):  ಪ್ರತಿಷ್ಠಿತ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಪ್ರಥಮ ಸುತ್ತಿನ ಜಯ ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದರೆ ಪಿವಿ ಸಿಂಧೂ ಪ್ರಥಮ ಸುತ್ತಿನಲ್ಲೇ ಸೋಲಿನ ಆಘಾತದೊಡನೆ ಪಂದ್ಯಾವಳಿಯಿಂದ ಹೊರನಡೆದಿದ್ದಾರೆ.
ಮಾಜಿ ವಿಶ್ವ ನಂ. ಒನ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಂಗ್ ಕಾಂಗ್ ನ ನೈಗನ್ ಯಿ ಚೆಯುಂಗ್ ವಿರುದ್ಧ 20-22 21-17 24-22 ಸೆಟ್ ಗಳಿಂದ ಜಯ ಸಾಧಿಸಿದ್ದಾರೆ.
ಇನ್ನು ಮೂರನೇ ಶ್ರೇಯಾಂಕಿತರಾದ ಸಿಂಧೂ  ಬಿವೇನ್ ಝಾಂಗ್ ವಿರುದ್ಧ 17-21 21-16 18-21 ಸೆಟ್ ಗಳಿಂದ ಸೋತು ಹಿಮ್ಮೆಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸಮೀರ್ ವರ್ಮಾ ಚೀನಾದ ಶಿ ಯುಕಿ ವಿರುದ್ಧ 21-17, 21-18 ಸೆಟ್ ಗಳಿಂದ ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಇನ್ನೊಂದೆಡೆ ಮಿಶ್ರ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಎಸ್. ರಾಂಕಿರೆಡ್ಡಿ ಜೋಡಿ ಕೊರಿಯನ್ ಜೋಡಿಯಾದ ಸಿಂಗ್ ಜೀ ಸೆಯೋ ಹಾಗೂ ಯು ಜಂಗ್ ಚೇ ವಿರುದ್ಧ 17-21 18-21 ಸೆಟ್ ಅಂತರದಲ್ಲಿ ಸೋತು ನಿರ್ಗಮಿಸಿದೆ.
SCROLL FOR NEXT