ಕ್ರೀಡೆ

ಯೂತ್ ಒಲಿಂಪಿಕ್ಸ್ 2018: ಪುರುಷರ ಟ್ರಿಪಲ್ ಜಂಪ್ ನಲ್ಲಿ ಪ್ರವೀಣ್ ಗೆ ಕಂಚು!

Raghavendra Adiga
ಬ್ಯೂರಿಸ್ ಐರಿಸ್(ಅರ್ಜೆಂಟೈನಾ): ತಮಿಳುನಾಡು ರೈತರ ಮಗನಾದ ಪ್ರವೀಣ್ ಚಿತ್ರವೇಲ್ ಅರ್ಜೆಂಟೈನಾದಲ್ಲಿ ನಡೆಯುತ್ತಿರುವ ಮೂರನೇ ಯೂತ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಪ್ರವೀಣ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ಗಳಿಸಿಕೊಟ್ಟಿದ್ದಾರೆ.
17 ವರ್ಷದ ಪ್ರವೀಣ್ ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಎರಡನೇ ಹಂತದಲ್ಲಿ 15.68 ಮೀ. ದೂರಕ್ಕೆ ಜಿಗಿದಿದ್ದಾರೆ. ಇದಕ್ಕೆ ಮುನ್ನ ಮೊದಲ ಹಂತದ ಸ್ಪರ್ಧೆಯಲ್ಲಿ 15.84 ಮೀ. ದೂರಕ್ಕೆ ಜಿಗಿದು ಸಾಧನೆ ಮಾಡಿದ್ದರು.ಒಟ್ಟಾರೆ 31.52 ಮೀ. ಜಿಗಿತದೊಡನೆ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಇದೇ ವಿಭಾಗದಲ್ಲಿ ಕ್ಯೂಬಾ ಹಾಗೂ ನೈಜೀರಿಯಾ ಸ್ಪರ್ಧಿಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.
ಇದಕ್ಕೆ ಮುನ್ನ ಸೋಮವಾರ ನಡೆದ ಪಮ್ದ್ಯದಲ್ಲಿ ಭಾರತದ ಸೂರಜ್ ಪನ್ವಾರ್ ಪುರುಷರ 5,000 ಮೀ  ರೇಸ್ ವಾಕ್ ನಲ್ಲಿ  ಬೆಳ್ಳಿ ಪದಕ  ಗಳಿಸಿದ್ದರು. 
ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಒಟ್ಟು 11  ಪದಕಗಳನ್ನು ಜಯಿಸಿದೆ. ಇದರಲ್ಲಿ 3  ಚಿನ್ನ, 7 ಬೆಳ್ಳಿ ಹಾಗೂ  1 ಕಂಚಿನ ಪದಕ ಸೇರಿದೆ. ಪದಕ ಪಟ್ಟಿಯಲ್ಲಿ ಭಾರತ 12ನೇ ಸ್ಥಾನದಲ್ಲಿದೆ.
SCROLL FOR NEXT