ಕಿಡಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್
ಒಡೆಂಸೆ: ಭಾರತದ ಅನುಭವಿ ಬ್ಯಾಂಡ್ಮಿಂತನ್ ತಾರೆ ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಇಂಡೋನೇಶಿಯಾದ ಗ್ರೆಗೊರಿಯಾ ತುಂಜಂಗ್ ಅವರನ್ನು 21-11, 21-12 ಅಂತರದಿಂದ ಸೋಲಿಸಿದ ಸೈನಾ ನೆಹ್ವಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.
30 ನಿಮಿಷ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಸೈನಾ ಜಯ ಗಳಿಸಿದ್ದು ಪ್ರಶಸ್ತಿಯ ಭರವಸೆ ಹೆಚ್ಚಿಸಿದ್ದಾರೆ.
ಅಂತಿಮ ಸುತ್ತಿನಲ್ಲಿ ನೆಹ್ವಾಲ್ ಅಗ್ರ ಶ್ರೇಯಾಮ್ಕಿತ ಆಟಗಾರ್ತಿ ತೈ ಝು ಯಿಂಗ್.ಅವರನ್ನು ಎದುರಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಭಾರತದ ಇನ್ನೋರ್ವ ಆಟಗಾರ ಕಿಡಂಬಿ ಶ್ರೀಕಾಂತ್ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ. 1 ಕೆಂಟೋ ಮೊಮೊಟಾ ವಿರುದ್ಧ 21-16, 21-12 ಸೆಟ್ ಗಳಿಂದ ಪರಾಜಿತರಾಗಿದ್ದಾರೆ.
ಉತ್ಸಾಹದಿಂದ ಕಣಕ್ಕಿಳಿದರೂ ಸಹ ಹಾಲಿ ಚಾಂಪಿಯನ್ ಮೊಮೊಟಾ ಅವರನ್ನು ಎದುರಿಸುವಲ್ಲಿ ಶ್ರೀಕಾಂತ್ ವಿಫಲರಾದರು.