ಸೈನಾ ನೆಹ್ವಾಲ್ 
ಕ್ರೀಡೆ

ಡೆನ್ಮಾರ್ಕ್ ಓಪನ್ : ಸೈನಾ ನೆಹ್ವಾಲ್ , ಕಿಡಂಬಿ ಶ್ರೀಕಾಂತ್ ಸೆಮಿಫೈನಲ್ಸ್ ಪ್ರವೇಶ !

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಸೆಮಿ ಫೈನಲ್ಸ್ ಪ್ರವೇಶಿಸಿದ್ದಾರೆ.

ಒಡೆಂಸೆ:  ಡೆನ್ಮಾರ್ಕ್  ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ  ಭಾರತದ ಸೈನಾ ನೆಹ್ವಾಲ್ ಹಾಗೂ  ಕಿಡಂಬಿ ಶ್ರೀಕಾಂತ್ ಸೆಮಿ ಫೈನಲ್ಸ್ ಪ್ರವೇಶಿಸಿದ್ದಾರೆ.

ಕಳೆದ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್  ಕ್ವಾಟರ್ಸ್ ಫೈನಲ್ ಪಂದ್ಯದಲ್ಲಿ ವಿಶ್ವದ 10 ನೇ ಶ್ರೇಯಾಂಕದ ಸೈನಾ ನೆಹ್ವಾಲ್,   ಏಳನೇ  ಶ್ರೇಯಾಂಕದ ಜಪಾನಿನ ನೊಜೊಮಿ ಒಕುಹಾರ ವಿರುದ್ಧ ಮೊದಲ ಗೇಮ್ ನಲ್ಲಿ ಸೋತರೂ ನಂತರ,  17-21, 21-16, 21-12  ನೇರ ಸೆಟ್ ಗಳಿಂದ ಮಣಿಸಿದರು.

ಕಳೆದ ತಿಂಗಳು ಕೊರಿಯಾದಲ್ಲಿ ನಡೆದ ಪಂದ್ಯ ಸೇರಿದಂತೆ ಮೂರು ಟೂರ್ನಿಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದ ಸೈನಾ ನೆಹ್ವಾಲ್ ಅವರಿಗೆ ಈ ಟೂರ್ನಿ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಸೆಮಿಫೈನಲ್ಸ್ ನಲ್ಲಿ ಅವರು 19 ನೇ ಶ್ರೇಯಾಂಕಾದ ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕಾ ತುಂಜಾಂಗ್ ವಿರುದ್ಧ ಸೆಣಸಲಿದ್ದಾರೆ.

ಮತ್ತೊಂದೆಡೆ ಪುರುಷರ ಸಿಂಗಲ್ಸ್ ನಲ್ಲಿ ಭಾರತದವರೇ ಆದ ವರ್ಮಾ ಅವರನ್ನು ಸೋಲಿಸಿದ ಕಿಡಂಬಿ ಶ್ರೀಕಾಂತ್ ಸೆಮಿಫೈನಲ್ಸ್ ಪ್ರವೇಶಿಸಿದ್ದಾರೆ.

6ನೇ ಕ್ರಮಾಂಕದ ಶ್ರೀಕಾಂತ 23 ನೇ ಶ್ರೇಯಾಂಕದ ವರ್ಮಾ ಅವರನ್ನು 22-20, 19-21, 23-21 ಅಂಕಗಳಿಂದ ಮಣಿಸಿದರು.

ಮುಂದಿನ ಸೆಮಿಫೈನಲ್ಸ್ ಪಂದ್ಯದಲ್ಲಿ  ಜಪಾನಿನ ವಿಶ್ವದ ನಂಬರ್ 1 ಶ್ರೇಯಾಂಕಿತ ಕೆಂಟೊ ಮೊಮೊಟಾ ವಿರುದ್ದ ಸೆಣಸಲಿದ್ದಾರೆ.

ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಭಾರತದ ಅಶ್ವನಿ ಪೊನ್ನಪ್ಪ ಹಾಗೂ ಎನ್, ಸಿಕ್ಕಿ ರೆಡ್ಡಿ ತಂಡ  ಯೂಕಿ ಪುಕುಶಿಮಾ ಮತ್ತು ಸಯಕಾ ಹಿರೊಟಾ ತಂಡದ  ವಿರುದ್ಧ ಸೋತಿದ್ದು, ಸೆಮಿಫೈನಲ್ಸ್ ಪ್ರವೇಶದ ಕನಸು ನುಚ್ಚು ನೂರಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT