ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 9-0 ಅಂತರದ ಭರ್ಜರಿ ಜಯ 
ಕ್ರೀಡೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 9-0 ಅಂತರದ ಭರ್ಜರಿ ಜಯ

ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಅದ್ಭುತ ಆಟವಾಡಿದ್ದು ಎದುರಾಳಿ ಜಪಾನ್ ವಿರುದ್ಧ 9-0ಅಂತರದ ಬೃಹತ್ ಗೆಲುವು ಸಾಧಿಸಿದೆ.

ನವದೆಹಲಿ: ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಅದ್ಭುತ ಆಟವಾಡಿದ್ದು ಎದುರಾಳಿ ಜಪಾನ್ ವಿರುದ್ಧ 9-0 ಅಂತರದ ಬೃಹತ್ ಗೆಲುವು ಸಾಧಿಸಿದೆ.
ಕ್ರೀಡಾಕೂಟದಲ್ಲಿನ ಮೂರನೇ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಒಟ್ಟು 9  ಅಂಕಗಳೊಡನೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು ಏಷ್ಯನ್ ಗೇಮ್ಸ್ ಚಾಂಪಿಯನ್ ತಂಡವಾದ ಜಪಾನ್ ಗೆ ಒಂದೂ ಗೋಲು ದಾಖಲಿಸಲು ಅವಕಾಶವನ್ನೇ ನೀಡದೆ ಹೋದದ್ದು ವಿಶೇಷವಾಗಿತ್ತು.
ಭಾರತ ಪರವಾಗಿ ಲಲಿತ್ ಉಪಧ್ಯಾಯ್ (4ನೇ ನಿಮಿಷ), ಗೋಲು ಗಳಿಸುವುದರೊಡನೆ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರೆ ಬಳಿಕ ಲಲಿತ್ ಉಪಧ್ಯಾಯ್ ಹೀಗೆ ಭಾರತೀಯ ಆಟಗಾರರು ಒಬ್ಬರ ಹಿಂದೊಬ್ಬರು ಗೋಲು ದಾಕಲಿಸುತ್ತಾ ಹೋದರು.
ಉಪಧ್ಯಾಯ್ ಮತ್ತು ಮನ್‌ದೀಪ್ ಸಿಂಗ್ ತಲಾ ಎರಡು ಗೋಲು ಗಳಿಸಿ ಗಮನ ಸೆಳೆದಿದ್ದರು. 
ಭಾರತೀಯ ತಂಡದ ಕೋಚ್ ಹರೇಂದ್ರ ಸಿಂಗ್ ತಂಡದ ಈ ಅಮೋಘ ಪ್ರದರ್ಶನದಿಂದ ಸಂತಸಗೊಂಡಿದ್ದಾರೆ."ನಾವು ಆಡಿದ ರೀತಿ ಉತ್ತಮವಾಗಿತ್ತು. ಒಂದು ಯೋಜನಾಬದ್ದ ರೀತಿಯಲ್ಲಿ ಆಟವಾಡಿದ್ದೇವೆ.ಹಾಗೆಯೇ ಜಪಾನ್ ತಂಡವನ್ನು ಅವರ ನಿರ್ದಿಷ್ಟ ರೀತಿಯಲ್ಲಿ ಆಟವಾಡಲು ಬಿಡದೆ ಕಟ್ಟಿ ಹಾಕಿದ್ದೆವು" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!