ಕ್ರೀಡೆ

ಹಾಕಿ ಏಷ್ಯಾ ಕಪ್: ಭಾರತದ ಗೆಲುವಿನ ನಾಗಾಲೋಟ, ಕೊರಿಯಾ ವಿರುದ್ಧ 4-1 ಅಂತರದ ಜಯ!

Raghavendra Adiga
ನವದೆಹಲಿ: ಪ್ರತಿಷ್ಠಿತ ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಬುಧವಾರದ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಕೊರಿಯಾವನ್ನು  4-1 ಗೋಲುಗಳಿಂದ ಮಣಿಸಿದೆ. ಈ ಮೂಲಕ ತಾನು ಅಜೇಯ ತಂಡವಾಗಿ ಸೆಮಿ ಫೈನಲ್ಸ್ ಹಂತ ಪ್ರವೇಶಿಸಿದೆ.
ಭಾರತ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಿದ್ದು 13 ಅಂಕ ಗಳಿಸಿದೆ.
ಡ್ರಾಗ್ಲರ್ ಹರ್ಮನ್ ಪ್ರೀತ್ ಸಿಂಗ್ ನಾಲ್ಕು ಪೆನಾಲ್ಟಿ ಕಾರ್ನರ್ ಗಳಲ್ಲಿ ಮೂರನ್ನು ಗೋಲಾಗಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.ಹರ್ಮನ್ ಪ್ರೀತ್ ಅವರು ಪಂದ್ಯದ 4ನೇ, 47ನೇ ಮತ್ತು 59ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದ್ದರು.
ಇದೇ ವೇಳೆ ತಂಡದಲ್ಲಿನ ಇನೋರ್ವ ಆಟಗಾರ ಗುರ್ಜಂತ್ ಸಿಂಗ್ 10ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದ್ದಾರೆ.
ಕೊರಿಯಾ ಪರವಾಗಿ ಲೀ ಸೆಯುಂಗಿಲ್ 20ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿ ತಂಡಕ್ಕೆ ಸೋಲಿನ ಅಂತರವನ್ನು ಕಡಿಮೆಗೊಳಿಸಿಕೊತ್ಟಿದ್ದರು.
ಅಗ್ರ ಸ್ಥಾನದಲ್ಲಿರುವ ಭಾರತ ಇದಾಗಲೇ ಸೆಮಿಫೈನಲ್ಸ್ ಪ್ರವೇಶಿಸಿದೆ. ಕೊರಿಯಾ ಪಾಲಿಗೆ ಈ ಪಂದ್ಯ ಮಾಡಿ ಇಲ್ಲವೇ ಮಡಿ ಪಂದ್ಯವಾಗಿದ್ದ ಕಾರಣ ಪರಾಭವಗೊಂಡ ಕೊರಿಯಾ ಪದೆ ಸ್ಪರ್ಧೆಯಿಂದ ಹಿಂದೆ ಸರಿದಿದೆ.
ಇನ್ನು ಭಾರತ, ಮಲೇಷಿಯಾ, ಜಪಾನ್ ಹಾಗೂ ಪಾಕಿಸ್ತಾನ ತಂಡಗಳು ಸೆಮೀಸ್ ನಲ್ಲಿ ಸೆಣೆಸಲಿದೆ.
SCROLL FOR NEXT