ಚಂಡೀಗಢ: ಏಷ್ಯನ್ ಗೇಮ್ಸ್ ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದ, ಅರ್ಜುನ ಪ್ರಶಸ್ತಿ ವಿಜೇತ ಹರಿಯಾಣದ ದಿನೇಶ್ ಕುಮಾರ್ ಈಗ ಬೀದಿಗಳಲ್ಲಿ ಕುಲ್ಫಿ ಮಾರಾಟ ನಡೆಸಿದ್ದಾರೆ!
ನಮ್ಮ ದೇಶದ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆಂದು ಸರ್ಕಾರ ನಾನಾ ಯೋಜನೆಗಳನ್ನು ರೂಪಿಸಿದೆ. ಆದರೆ ದಿನೇಶ್ ಕುಮಾರ್ ಅವರಂತಹಾ ಕ್ರೀಡಾ ತಾರೆಯರ ಜೀವನ ಕಂಡಾಗ ಇಂತಹಾ ಯೋಜನೆ ಫಲಾನುಭವಿಗಳಾಗುತ್ತಿರುವವರು ಯಾರು ಎನ್ನುವ ಪ್ರಶ್ನೆ ಏಳದಿರುವುದಿಲ್ಲ.
ಬಾಕ್ಸಿಂಗ್ ವಿಭಾಗದಲ್ಲಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದು 2010ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ದಿನೇಶ್ ಇಂದು ಜೀವನೋಪಾಯಕ್ಕೆಂದು ಕುಲ್ಫಿ ಮಾರಾಟ ನಡೆಸಿದ್ದಾರೆ.
ಹರಿಯಾಣದ ಬಿವಾನಿಯವರಾದ ದಿನೇಶ್ ದೇಶದ ಬಾಕ್ಸಿಂಗ್ ಲೋಕದ ಹೊಸ ದ್ರುವತಾರೆ ಎಂದು ಬಿಂಬಿತರಾಗಿದ್ದರು. ಆದರೆ 2014ರಲ್ಲಿ ಸಂಭವಿಸಿದ್ದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗೆ ಕುಟುಂಬಸ್ಥರು ಸಾಲ ಮಾಡಿದ್ದರು. ಅಪಘಾತದಿಂದಾಗಿ ದಿನೇಶ್ ಅವರ ಅದುವರೆಗಿನ ಬಾಕ್ಸಿಂಗ್ ವೃತ್ತಿಜೀವನಕ್ಕೆ ಅನಿರೀಕ್ಷಿತ ತೆರೆ ಬಿದ್ದಿತ್ತು.
ಇದೀಗ ದಿನೇಶ್ ಬಾಕ್ಸಿಂಗ್ ತರಬೇತಿಗಾಗಿಯೂ, ಅಪಘಾತದಿಂದ ಪಡೆದ ಚಿಕಿತ್ಸೆಗಾಗಿಯೂ ಮಾಡಿದ್ದ ಸಲವನ್ನು ತೀರಿಸಬೇಕಾಗಿದ್ದು ಇದನ್ನರಿತ ದಿನೇಶ್ ತಾವೂ ತಂದೆಗೆ ನೆರವಾಗಲು ರಸ್ತೆ ಬದಿಯಲ್ಲಿ ಕುಲ್ಫಿ ಮಾರಾಟಕ್ಕೆ ಇಳಿದಿದ್ದಾರೆ.ದಿನೇಶ್ ಅವರನ್ನು ಕಂಡ ಪಾದಚಾರಿಗಳು, ಕಾರು, ಬೈಕ್ ಸವಾರರು ಅವರಲ್ಲಿ ಕುಲ್ಫಿ ಕರೀದಿಸಿ ಜತೆಯಲ್ಲೊಂದು ಸೆಲ್ಫೀ ತೆಗೆದುಕೊಂಡು ಹೋಗುವುದರ ಹೊರತಾಗಿ ಸರ್ಕಾರದಿಂದ ಇದುವರೆಗೆ ಯಾವ ಸಹಾಯವೂ ಸಿಕ್ಕಿಲ್ಲ.
"ಸರ್ಕಾರ ನಮಗೆ ಸಹಾಯ ಮಾಡುವ ಭರವಸೆ ಇಲ್ಲ.ಯಾವ ರಾಜಕಾರಣಿಗಳ ಮೇಲೆ ವಿಶ್ವಾಸವೂ ಇಲ್ಲ. ಕುಟುಂಬವನ್ನು ಸಲಹಲಿಕ್ಕಾಗಿ ಕುಲ್ಫಿ ವ್ಯಾಪಾರ ನಡೆಸಿದ್ದೇನೆ.ನಾನು ಬಾಕ್ಸಿಂಗ್ ಜಗತ್ತಿನಲ್ಲಿ ದ್ರುವತಾರೆಯಾಗಬೇಕೆನ್ನುವ ಕನಸನ್ನು ನನ್ನ ತಂದೆ ಕಂಡಿದ್ದರು.
"ನನಗೆ ಅಪಘಾತವಾಗಿದ್ದು ವೃತ್ತಿ ಜೀವನ ಅಂತ್ಯವಾಗಿದೆ. ಆದರೆ ನನ್ನಲ್ಲಿನ ಬಾಕ್ಸಿಂಗ್ ಹಾಗೆಯೇ ಇದೆ. ನಾನೀಗಲೂ ಕಿರಿಯರಿಗೆ ಬಾಕ್ಸಿಂಗ್ ತರಬೇತಿ ನೀದುತ್ತಿದ್ದೇನೆ. ಇನ್ನಾದರೂ ಸರ್ಕಾರದವರು ನನಗೆ ರಾಜ್ಯಮಟ್ಟದ ತರಬೇತುದಾರ ಹುದ್ದೆ ನೀಡಿದರೆ ನಿರ್ವಹಿಸಬಲ್ಲೆ" ದಿನೇಶ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos