ಎಡ್ವರ್ಡ್ ಬೆಲ್ಲೊ, ಗ್ಯಾಬ್ರಿಯೆಲ್ಲಾ ಬ್ರಿಟೊ 
ಕ್ರೀಡೆ

ಸುಮಧುರ ಕ್ಷಣ: ಗೋಲ್ ಬಾರಿಸಿ ಪ್ರೇಮ ನಿವೇದನೆ ಮಾಡಿದ ಫುಟ್ಬಾಲಿಗನಿಗೆ 3 ತಿಂಗಳ ನಿಷೇಧದ ಶಿಕ್ಷೆ, ಅಸಲಿಗೆ ಆಗಿದ್ದೇನು?

ತನ್ನ ಪ್ರೀತಿಗೆ ಪಾತ್ರಳಾಗಬೇಕಿರುವ ಗೆಳತಿ ಮೈದಾನದಲ್ಲಿ ತನ್ನ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಗೋಲು ಹೊಡೆದ ಖುಷಿಯಲ್ಲಿ ಫುಟ್ಬಾಲಿಗನೊಬ್ಬ ಮೈದಾನದಲ್ಲೇ ಆಕೆಗೆ ಪ್ರೇಮ ನಿವೇದನೆ...

ವೆನಿಜುವೆಲ್ಲ: ತನ್ನ ಪ್ರೀತಿಗೆ ಪಾತ್ರಳಾಗಬೇಕಿರುವ ಗೆಳತಿ ಮೈದಾನದಲ್ಲಿ ತನ್ನ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಗೋಲು ಹೊಡೆದ ಖುಷಿಯಲ್ಲಿ ಫುಟ್ಬಾಲಿಗನೊಬ್ಬ ಮೈದಾನದಲ್ಲೇ ಆಕೆಗೆ ಪ್ರೇಮ ನಿವೇದನೆ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
ವೆನಿಜುವೆಲ್ಲ ಫುಟ್ಬಾಲ್ ಆಟಾಗರ ಎಡ್ವರ್ಡ್ ಬೆಲ್ಲೊ ಚಿಲಿಯನ್ ಪ್ರಿಮಿಯರ್ ವಿಭಾಗದ ಪಂದ್ಯದಲ್ಲಿ ಎವರ್ಟನ್ ತಂಡದ ವಿರುದ್ಧ ಗೋಲ್ ಹೊಡೆದಿದ್ದರು. ಗೋಲ್ ಹೊಡೆದ ಮರುಕ್ಷಣವೇ ಗೆಳತಿಯ ಬಳಿ ಓಡಿ ಹೋಗಿ ಆಕೆಯ ಮುಂದೆ ಕುಳಿತು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. 
ಎಡ್ವರ್ಡ್ ಪ್ರೇಮ ನಿವೇದನೆಗೆ ಅಚ್ಚರಿಯಾದ ಗೆಳತಿ ಗ್ಯಾಬ್ರಿಯೆಲ್ಲಾ ಬ್ರಿಟೊ ಒಪ್ಪಿಗೆಯೂ ಸೂಚಿಸಿದ್ದಾರೆ. ಈ ಕ್ಷಣವನ್ನು ಫುಟ್ಬಾಲ್ ಮೈದಾನದಲ್ಲಿದ್ದ ಪ್ರತಿಯೊಬ್ಬರೂ ಖುಷಿಯಿಂದ ಕಣ್ತುಂಬಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಇನ್ನು ಆಟದ ಮಧ್ಯೆ ಮೈದಾನದಿಂದ ಹೊರಗಿದ್ದ ಎಡ್ವರ್ಡ್ ಗೆ ರೆಫ್ರಿ ಹಳದಿ ಕಾರ್ಡ್ ನೀಡಿ ಮೂರ್ನಾಲ್ಕು ತಿಂಗಳು ಯಾವುದೇ ಪಂದ್ಯ ಆಡದಂತೆ ಸೂಚಿಸಿದ್ದಾರೆ. ಇದಕ್ಕೆ ಎಡ್ವರ್ಡ್ ನಾನು ಮೂರ್ನಾಲ್ಕು ತಿಂಗಳು ತಂಡದಿಂದ ಹೊರಗುಳಿಯುತ್ತೇನೆ ಎಂದು ಗೊತ್ತು. ಆದರೂ ಈ ಸಮಯದಲ್ಲಿ ತಂಡದಿಂದ ಹೊರಗಿರುವ ಸಮಯ ನನಗೆ ಸಿಹಿಯಾಗಿರುತ್ತದೆ ಎಂದು ಹೇಳಿದ್ದಾರೆ. 
ಸಾಮಾನ್ಯವಾಗಿ ಗಾಯಗಳಾದಾಗ ತಂಡದಿಂದ ಹೊರಗುಳಿಯುವುದು ಮನಸ್ಸಿಗೆ ನೋವು ತರುತ್ತದೆ. ಆದರೆ ಗೆಳತಿ ನನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಾಗ ತಂಡದಿಂದ ದೂರವಿರುವುದು ಸಿಹಿ ಅನುಭವ ನೀಡುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT