ಏಷ್ಯನ್ ಗೇಮ್ಸ್ 2018: ಭಾರತ ವನಿತೆಯರ ಸ್ಕ್ವ್ಯಾಷ್ ತಂಡಕ್ಕೆ ರಜತ ಪದಕ!
ಜಕಾರ್ತಾ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಿಯ ಮಹಿಳಾ ಸ್ಕ್ವ್ಯಾಷ್ ತಂಡ ಬೆಳ್ಳಿ ಪದಕ ಗೆದ್ದಿದೆ.
ಬಲಿಷ್ಠ ಹಾಂಗ್ ಕಾಂಗ್ ತಂಡದೆದುರು 0-2 ಅಂತರದಲ್ಲಿ ಸೋತ ಭಾರತ ವನಿತೆಯರು ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.
ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಜೋಷ್ನಾ ಚಿನ್ನಪ್ಪ, ದೀಪಿಕಾ ಪಳ್ಳಿಕಲ್, ಕಾರ್ತಿಕ್, ಸುನಯನ ಕುರುವಿಲ್ಲಾ ಮತ್ತು ತಾನ್ವಿ ಖನ್ನಾ ಅವರನ್ನೊಳಗೊಂಡ ತಂಡಹಾಂಗ್ ಕಾಂಗ್ ವಿರುದ್ಧ ವೀರೋಚಿತ ಸೋಲು ಕಂಡಿದೆ.
2014 ಏಷ್ಯನ್ ಗೇಮ್ಸ್ ನಲ್ಲಿಯೂ ಭಾರತ ಮಹಿಲಾ ತಂಡ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿತ್ತು.
ಮಹಿಳಾ ಸ್ಕ್ವ್ಯಾಷ್ ಬೆಳ್ಳಿ ಪದಕದೊಂದಿಗೆ ಭಾರತ ಈ ಕ್ರೀಡಾಕುತದಲ್ಲಿ ಒಟ್ಟು 68 ಪದಕ ಗಳಿಸಿ ಎಂಟನೇ ಸ್ಥಾನದಲ್ಲಿದೆ.