ಹೃದಯ್‌ ಹಜಾರಿಕಾ 
ಕ್ರೀಡೆ

ಶೂಟಿಂಗ್ ವಿಶ್ವ ಚಾಂಪಿಯನ್ ಶಿಪ್: ಭಾರತಕ್ಕೆ ಎರಡು ಚಿನ್ನದ ಪದಕ

ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ಸಾಗುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತೀಯರ ಚಿನ್ನದ ಬೇಟೆ ಮುಂದುವರಿದಿದೆ.

ಚಾಂಗ್‍ವೊನ್(ದಕ್ಷಿಣ ಕೊರೊಯಾ): ದಕ್ಷಿಣ ಕೊರಿಯಾದ ಚಾಂಗ್‍ವೊನ್ ನಲ್ಲಿ ಸಾಗುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತೀಯರ ಚಿನ್ನದ ಬೇಟೆ ಮುಂದುವರಿದಿದೆ. 
ಏಷ್ಯನ್ ಗೇಮ್ಸ್ ಚಿನ್ನದ ಶೂಟರ್ ಸೌರಭ್  10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಗುರುವಾರ ಚಿನ್ನಕ್ಕೆ ಗುರಿಯಿಟ್ಟಿದ್ದರೆ ಶುಕ್ರವಾರ ಭಾರತಕ್ಕೆ ಮತ್ತೆರಡು ಚಿನ್ನದ ಪದಕ ಲಭಿಸಿದೆ.
ಪುರುಷರ 10 ಮೀ. ಏರ್‌ ರೈಫ‌ಲ್‌ ನಲ್ಲಿ ಭಾರತದ ಜೂನಿಯರ್‌ ಶೂಟರ್ ಹೃದಯ್‌ ಹಜಾರಿಕಾ ಚಿನ್ನದ ಪದಕ ಗಳಿಸಿಕೊಂಡರೆ ಭಾರತೀಯ ಮಹಿಳಾ ಪಡೆ ನೂತನ ದಾಖಲೆ ನಿರ್ಮಿಸಿ ಬಂಗಾರದ ಪದಕ ತಮ್ಮದಾಗಿಸಿಕೊಂಡಿದೆ.
ಹೃದಯ್‌  ಅಂತಿಮ ಸುತ್ತಿನಲ್ಲಿ 627.3 ಅಂಕ ಪಡೆದು ಇರಾನ್ ನ ತಮ್ಮ ಎದುರಾಳಿಯ ವಿರುದ್ಧ ಜಯ ಸಾಧಿಸಿದ್ದಾರೆ.
ಇ. ವಲರಿವನ್‌, ಶ್ರೇಯಾ ಅಗರ್‌ವಾಲ್‌, ಮಾನಿನಿ ಕೌಶಿಕ್‌ ಅವರನ್ನೊಳಗೊಂಡ ಬಾರತೀಯ ಮಹಿಳಾ ಶೂಟರ್ ತಂಡವು 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯಲ್ಲಿ ಒಟ್ಟು 1880.7 ಅಂಕಗಳಿಸಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಲ್ಲದೆ ಬಂಗಾರದ ಪದಕಕ್ಕೆ ಕೊರಳೊಡ್ಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಆಸ್ಪತ್ರೆಗೆ ಭೇಟಿ ನೀಡಿ ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಆರೋಗ್ಯ ವಿಚಾರಿಸಿದ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 9ನೇ ಶತಕ ಸಿಡಿಸಿದ KL Rahul: 10,000 ಅಂತಾರಾಷ್ಟ್ರೀಯ ರನ್!

ಅಂತಿಮ ಹಂತದಲ್ಲಿ 21 ಚಿನ್ನದ ಪದಕಗಳು: 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 85 ಪದಕ!

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!