ನ್ಯೂಯಾರ್ಕ್: ಮೊಣಕಾಲು ನೋವಿನ ಕಾರಣ ವಿಶ್ವ ನಂಬರ್1 ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಿಂದ ನಿವೃತ್ತರಾಗಿದ್ದಾರೆ.
ಪುರುಷ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ನಡಾಲ್ ಆಸ್ಟ್ರೀಯಾದ ಡೊಮಿನಿಕ್ ಥೀಮ್ ಅವರನ್ನು ಮಣಿಸಿ ಸೆಮಿಫೈನಲ್ಸ್ ತಲುಪಿದ ನಡಾಲ್ ಗೆ ಮೊಣಕಾಲು ಸಮಸ್ಯೆ ಉಂತಾಗಿದ್ದು ಸೆಮಿಫೈನಲ್ಸ್ ನಿಂದ ಹಿಂದೆ ಸರಿದಿದ್ದಾರೆ.
ಇದೇ ವೇಳೆ ಜಪಾನ್ ನ ಕಿ ನಿಶಿಕೋರಿ ವಿರುದ್ಧ ಜಯ ಸಾಧಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್ ಫೈನಲ್ ಸುತ್ತಿಗೆ ಪ್ರವೇಶ ಗಿಟ್ಟಿಸಿದ್ದಾರೆ.
ಸೆಮಿ ಫೈನಲ್ಸ್ ಹಂತದಲ್ಲಿ ನಡಾಲ್ ಅರ್ಜೆಂಟೈನಾದ ಮಾರ್ಟಿನ್ ಡೆಲ್ ಪೊಟ್ರೋ ಅವರನ್ನು ಎದುರಿಸಿದ್ದರು. ಎರಡು ಗಂಟೆ ನಡೆದ ಹೋರಾಟದಲ್ಲಿ ನಡಾಲ್ 7-6, 6-2 ಅಂಕ ಗಳಿಸಿದ್ದರು. ಇಷ್ಟರಲ್ಲಿ ಮೊಣಕಾಲು ನೋವು ಪ್ರಾರಂಬವಾಗಿ ಅನಿವಾರ್ಯವಾಗಿ ಆಟವನ್ನು ನಿಲ್ಲಿಸಬೇಕಾಯಿತು.
ಇದರೊಡನೆ ಡೆಲ್ ಪೊಟ್ರೋ ಪಂದ್ಯಾವಳಿಯ ಅಂತಿಮ ಘಟ್ಟಕ್ಕೆ ಲಗೆ ಇಟ್ಟಿದ್ದಾರೆ.
ಭಾನುವಾರ ನಡೆಯುವ ಯುಎಸ್ ಓಪನ್ ಫೈನಲ್ಸ್ ಪಂದ್ಯದಲ್ಲಿ ಡೆಲ್ ಪೊಟ್ರೋ ಜೊಕೊವಿಚ್ ಅವರನ್ನು ಎದುರಿಸಲಿದ್ದಾರೆ.
ಯುಎಸ್ ಓಪನ್ ಮಹಿಳಾ ವಿಭಾಗದ ಸೆಮಿಫೈನಲ್ಸ್ ನಲ್ಲಿ ಅನಾಸ್ತಾಸಿಜ ಸೇವಾಸ್ಟೋವಾ ವಿರುದ್ದ 6-3, 6-0ರ ಅಂತರದ ಗೆಲುವು ದಾಖಲಿಸಿದ ಸೆರೆನಾ, ವಿಲಿಯಮ್ಸ್ ಪಂದ್ಯಾವಳಿಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಇನ್ನೊಂದೆಡೆ ಮಡಿಸನ್ ಕೇಯ್ಸ್ ವಿರುದ್ಧ 6-2, 6-4ರ ಅಂತರದ ಗೆಲುವು ದಾಖಲಿಸಿದ ಜಪಾನ್‌ನ ನವೊಮಿ ಒಸಾಕಾ ಕೂಡ ಫೈನಲ್ಸ್ ತಲುಪಿದ್ದು ಇದೀಗ ಜಪಾನ್ ನ ಒಸಾಕಾ ಹಾಗೂ ಅಮೆರಿಕಾದವರೇ ಆದ ಸೆರೇನಾ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯಲಿದೆ.
ಇದುವರೆಗೆ ಆರು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ23ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸಲು ಕಾಯುತ್ತಿದ್ದಾರೆ. ಇನ್ನೊಂದೆಡೆ ಅಮೆರಿಕಾ ಓಪನ್ ಫೈನಲ್ ತಲುಪಿದ ಜಪಾನ್ ನ ಮೊದಲ ಆಟಗಾರ್ತಿಯಾಗಿ ಒಸಾಕಾ ಮಿಂಚಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics