ಚಾಂಗ್‍ವೊನ್: ದಕ್ಷಿಣ ಕೊರಿಯಾ ಚಾಂಗ್‍ವೊನ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಜೂನಿಯರ್ ಶೂಟರ್ ಗಳು ಪದಕಗಳಿಗೆ ಗುರಿ ಇಡುತ್ತಿದ್ದಾರೆ.
ಮಂಗಳವಾರ ನಡೆದ ಸ್ಪರ್ಧೆಗಳಲ್ಲಿ ಬಾರತ ಪುರುಷರ ತಂಡ ರಜತ ಪದಕ ಗಳಿಸಿದರೆ ಗುರ್ನಿಹಾಲ್ ಸಿಂಗ್ ಗರ್ಚಾವೈಯುಕ್ತಿಕ ವಿಭಾಗದ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.
ಪುರುಷರ ಸ್ಕಿಟ್ ತಂಡದ ಗುರ್ನಿಹಾಲ್ (119), ಅನಂತ್ ಜೀತ್ ಸಿಂಗ್ನರುಕ( (117) ಮತ್ತು ಆಯುಶ್ ರುದ್ರರಾಜು (119) ಅಂಕಗಳೊಡನೆ ಬೆಳ್ಳಿ ಪದಕ ಪಡೆದಿದೆ.
19 ವರ್ಷದ ಗುರ್ನಿಹಾಲ್ ಸಿಂಗ್ 46 ಪಾಯಿಂಟ್ ಗಳೊಡನೆ ಅದೇ ಸ್ಪರ್ಧೆಯ ವೈಯುಕ್ತಿಕ ವಿಬಾಗದಲ್ಲಿ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.ಈ ಮುಖೇನ ಗುರ್ನಿಹಾಲ್ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಶೂಟಿಂಗ್ ವಿಶ್ವಕಪ್ ನ ಹತ್ತನೇ ದಿನದವರೆವಿಗೆ ಭಾರತ ಶೂಟರ್ ಗಳು ಒಟ್ಟು 7 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಡನೆ ಒಟ್ಟಾರೆ 22 ಪದಕ ಗಳಿಸಿದ್ದು ಪದಕ ಪಟ್ಟಿಯಲ್ಲಿ ಬಾರತ 4ನೇ ಸ್ಥಾನದಲ್ಲಿದೆ.