ರೇಸ್ ವೇಳೆ ಸಹಸ್ಪರ್ಧಿಯ ಬೈಕ್ ಬ್ರೇಕ್ ಹಾಕಿದ ರೇಸರ್ 
ಕ್ರೀಡೆ

ವಿಡಿಯೋ: ಬೈಕ್ ರೇಸ್ ವೇಳೆ ಸಹಸ್ಪರ್ಧಿಯ ಬೈಕ್ ಬ್ರೇಕ್ ಹಾಕಿದ್ದ ರೇಸರ್ ವೃತ್ತಿ ಜೀವನವೇ ದುರಂತ ಅಂತ್ಯ!

ಬೈಕ್ ರೇಸರ್ ಓರ್ವ ಬೈಕ್ ರೇಸ್ ನಡೆಯುವಾಗಲೇ ಸಹಸ್ಪರ್ಧಿಯ ಬೈಕ್ ನ ಬ್ರೇಕ್ ಹಾಕಿದ ಅಘಾತಕಾರಿ ಘಟನೆ ನಡೆದಿದೆ.

ಸ್ಯಾನ್ ಮರಿನೋ: ಮೋಟೋ ಜಿಪಿ2 ಬೈಕ್ ರೇಸ್ ವೇಳೆ ಸಹ ಸ್ಪರ್ಧಿಯ ಬೈಕ್ ಬ್ರೇಕ್ ಹಾಕಿದ್ದ ರೇಸರ್ ವೃತ್ತಿ ಜೀವನ ದುರಂತ ಅಂತ್ಯ ಕಂಡಿದ್ದು, ತಾನೇ ಮಾಡಿದ ತಪ್ಪಿನಿಂದಾಗಿ ತನ್ನ ವೃತ್ತಿ ಜೀವನವನ್ನೇ ಕಳೆದುಕೊಳ್ಳುವಂತಾಗಿದೆ.
ಇಟಲಿಯ ಸ್ಯಾನ್ ಮರಿನೋದಲ್ಲಿ ನಡೆಯುತ್ತಿದ್ದ ಮೋಟೋ 2 ಬೈಕ್ ರೇಸ್ ವೇಳೆ ಈ ಘಟನೆ ನಡೆದಿದ್ದು, ಘಟನೆ ವೇಳೆ ಸಹಸ್ಪರ್ಧಿ ಸುಮಾರು 225 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದನಂತೆ. ಈ ವೇಳೆ ಹಿಂದಿನಿಂದ ಬಂದ ಮತ್ತೋರ್ವ ರೇಸರ್ ಬೈಕಿನ ಮುಂಬದಿ ಬ್ರೇಕ್ ಅನ್ನು ಒತ್ತಿದ್ದಾನೆ. ಈ ವೇಳೆ ಬೈಕ್ ಮೇಲಿದ್ದ ಸಹಸ್ಪರ್ಧಿ ವಿಚಲಿತನಾಗಿದ್ದು, ಕೂಡಲೇ ಅಪಾಯದ ಮುನ್ಸೂಚನೆ ಅರಿತು ಬೈಕ್ ಅನ್ನು ನಿಯಂತ್ರಿಸಿ ಆಗಬಹುದಾಗಿದ್ದ ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಜಕರು ಕೂಡಲೇ ಬೈಕ್ ರೇಸರ್ ನನ್ನು ರೇಸ್ ನಿಂದ ಅನರ್ಹಗೊಳಿಸಿದ್ದಾರೆ. 
ಇದರ ಬೆನ್ನಲ್ಲೇ ಅಗಬಹುದಾಗಿದ್ದ ಭಾರಿ ಮುಜುಗರ ತಪ್ಪಿಸಿಕೊಳ್ಳಲು ಬ್ರೇಕ್ ಹಾಕಿದ ಬೈಕ್ ಸವಾರನ ತಂಡ ಕೂಡ ಆತನನ್ನು ತಂಡದಿಂದಲೇ ಹೊರ ಹಾಕಿದೆ. ಇನ್ನು ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸಿರುವ 
ಏನಿದು ಘಟನೆ?
ಇಟಲಿಯ ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ನಡೆದ ಎಫ್‍ಐಎಂ ಮೋಟೋ2 ಗ್ಯಾಂಡ್ ಪ್ರಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‍ಷಿಪ್‍ ಬೈಕ್ ರೇಸಿಂಗ್ ವೇಳೆ ಇಟಲಿಯ ರೈಡರ್ ರೊಮಾನೋ ಫೆನಾಟಿಯವರು 225 ಕಿ.ಮೀಗೂ ಅಧಿಕ ವೇಗದಲ್ಲಿ ಸಾಗುತ್ತಿದ್ದರು. ಈ ವೇಳೆ ತಮ್ಮ ಪಕ್ಕದಲ್ಲೇ ಅಷ್ಟೇ ವೇಗದಲ್ಲಿ ಸಾಗುತ್ತಿದ್ದ ಸ್ಟೈಫಾನೋ ಮಾನ್ಜಿಯ ಬೈಕಿನ ಮುಂಬಾಗದ ಬ್ರೇಕ್‍ ಒತ್ತಿದ್ದಾರೆ. ಬ್ರೇಕ್ ಒತ್ತುತ್ತಿದಂತೆ ಬೈಕ್ ಅಲುಗಾಡಿದ್ದು, ಕೂಡಲೇ ಬೈಕನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸವಾರ ಸ್ಟೈಫಾನೋ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಈ ಘಟನೆ ಕಂಡ ರೆಫರಿ ಕೂಡಲೇ ಬ್ರೇಕ್ ಹಾಕಿದ ಇಟಲಿಯ ರೈಡರ್ ರೊಮಾನೋ ಫೆನಾಟಿಯನ್ನು ರೇಸ್ ನಿಂದ ಅನರ್ಹಗೊಳಿಸಿದ್ದಾರೆ. ಅಂತೆಯೇ ಅಂತಾರಾಷ್ಟ್ರೀಯ ಬೈಕ್ ರೇಸಿಂಗ್ ಸಂಸ್ಥೆ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಬೈಕ್ ಸವಾರ ರೊಮಾನೋ ಫೆನಾಟಿಗೆ ಮುಂದಿನ 2 ವರ್ಷಗಳ ಕಾಲ ನಿಷೇಧ ಹೇರಿದೆ.
ತಾನೇ ಮಾಡಿದ ತಪ್ಪಿಗೆ ವೃತ್ತಿ ಜೀವನ ಬಲಿಕೊಟ್ಟ ರೇಸರ್
ಇನ್ನು ರೇಸ್ ವೇಳೆ ತಾನು ಮಾಡಿದ ತಪ್ಪಿನಿಂದಾಗಿ ರೇಸರ್ ರೊಮಾನೋ ಫೆನಾಟಿ ತಮ್ಮ ವೃತ್ತಿ ಜೀವನವನ್ನೇ ಹಾಳು ಮಾಡಿಕೊಂಡಿದ್ದು, ಮುಜುಗರ ತಪ್ಪಿಸಿಕೊಳ್ಳಲು ಮತ್ತು ತಪ್ಪಿನ ಅರಿವಾಗಿ ತಮ್ಮ ವೃತ್ತಿ ಜೀವನಕ್ಕೇ ನಿವೃತ್ತಿ ಘೋಷಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಸ್ರೇಲ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಜೆರುಸಲೆಮ್ ಬಸ್ ಮೇಲೆ ಗುಂಡಿನ ದಾಳಿ: 5 ಸಾವು, 12 ಜನರಿಗೆ ಗಾಯ

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 19 ಮಂದಿ ಸಾವು; ಸೇನೆ ನಿಯೋಜನೆ; Video!

ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ನಾಳೆ ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ BRS-BJD ದೂರ; ಇದು INDIA ಅಭ್ಯರ್ಥಿ ವಿರುದ್ಧ NDA ಅಭ್ಯರ್ಥಿ ಗೆಲುವಿಗೆ ವರವಾಗುತ್ತಾ?

ರಷ್ಯಾದಿಂದ ತೈಲ ಖರೀದಿ "ರಕ್ತದ ಹಣ": ಭಾರತದ ಮೇಲೆ ಮತ್ತೆ ಕಿಡಿ ಕಾರಿದ ವ್ಯಾಪಾರ ಸಲಹೆಗಾರ ಪೀಟರ್ ನವರೊ!

SCROLL FOR NEXT