ಕಿಡಂಬಿ ಶ್ರೀಕಾಂತ್ 
ಕ್ರೀಡೆ

ಜಪಾನ್ ಓಪನ್: ಕಿಡಂಬಿ ಶ್ರೀಕಾಂತ್ ಗೆ ಸೋಲು, ಭಾರತದ ಅಭಿಯಾನ ಅಂತ್ಯ

ಪ್ರತಿಷ್ಠಿತ ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಬಾಗದ ಸ್ಪರ್ಧೆಯಲ್ಲಿ ಬಾರತದ ಕಿಡಂಬಿ ಶ್ರೀಕಾಂತ್ ಪರಾಜಿತರಾಗಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ.

ಟೋಕಿಯೋ: ಪ್ರತಿಷ್ಠಿತ ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಬಾಗದ ಸ್ಪರ್ಧೆಯಲ್ಲಿ ಬಾರತದ ಕಿಡಂಬಿ ಶ್ರೀಕಾಂತ್ ಪರಾಜಿತರಾಗಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ. ಶ್ರೀಕಾಂತ್ ನಿರ್ಗಮನದೊಡನೆ 7 ಲಕ್ಷ ಅಮೆರಿಕನ್ ಡಾಲರ್  ಮೌಲ್ಯದ ಮಹತ್ವದ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.
ಏಳನೇ ಶ್ರೇಯಾಂಕಿತ ಶ್ರೀಕಾಂತ್ ಪುರುಷ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಕೊರಿಯಾದ  ಲೀ ಡಾಗ್ ಕ್ಯೂನ್  ವಿರುದ್ಧ 21-19, 16-21, 18-21` ನೇರ ಸೆಟ್ ಗಳಿಂದ ಸೋಲನ್ನು ಅನುಭವಿಸಿದ್ದಾರೆ.
ಒಂದು ಗಂಟೆ 19  ನಿಮಿಷದ ಹೋರಾಟ ಇದಾಗಿತ್ತು. ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂಗ್ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದ್ದರೆ ಏಷ್ಯನ್ ಗೇಮ್ಸ್ ನಲ್ಲಿ ಮಾತ್ರ ಹಾಂಗ್ ಕಾಂಗ್ ಸ್ಪರ್ಧಾಳುವಿನ ಎದುರು ಪರಾಭವ ಅನುಭವಿಸಿ ನಿರಾಶೆ ಮುಡಿಸಿದ್ದರು.
ಇನ್ನು ಪಂದ್ಯದ ಮೊದಲ ಸುತ್ತಿನಲ್ಲಿ ಮುನ್ನಡೆ ಗಳಿಸಿದ್ದ ಶ್ರೀಕಾಂತ್ ಮುಂದಿನ ಸುತ್ತುಗಳಲ್ಲಿ ಅದೇ ರೀತಿಯ ಸ್ಪರ್ಧೆ ಒಡ್ಡುವಲ್ಲಿ ವಿಫಲರಾಗಿದ್ದರು.
ಇದಕ್ಕೆ ಮುನ್ನ ನಡೆದಿದ್ದ ಸ್ಪರ್ಧೆಗಳಲ್ಲಿ ಭಾರತದ ಭರವಸೆಯ ಆಟಗಾರರಆದ ಪಿವಿ ಸಿಂಧೂ, ಎಚ್‌ಎಸ್ ಪ್ರಣೋಯ್  ಸಹ ಕ್ರಮವಾಗಿ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಲು ಕಂಡು ಟೂರ್ನಿಯಿಂದ ಹಿಮ್ಮೆಟ್ಟಿದ್ದರು.
ಇನ್ನೊಂದೆಡೆ ಭಾರತದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಜೋಡಿಯು ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ ತಲುಪಿದರೂ ಮುಂದಿನ ಸುತ್ತು ಪ್ರವೇಶಿಸಲು ವಿಪಲರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel