ಕ್ರೀಡೆ

ಸಿಲೆಸಿಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿ: ಸ್ವರ್ಣ ಗೆದ್ದ ಮೇರಿ ಕೋಮ್, ಮನಿಷಾಗೆ ಬೆಳ್ಳಿ ಹಾರ

Raghavendra Adiga
ನವದೆಹಲಿ: ಪೊಲೆಂಡ್‌ನ ಗ್ಲಿವೈಸ್‌ನಲ್ಲಿ ನಡೆಯುತ್ತಿರುವ ಮಹಿಳೆಯರಿಗಾಗಿನ 13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಅನುಭವಿ ಮಹಿಳಾ ಬಾಕ್ಸರ್ ಮೇರಿ ಕೋಮ್ ಚಿನ್ನ ಹಾಗೂ ಮನಿಷಾ ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ.
ಮೇರಿ ಕೋಮ್ 48 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ವರ್ಷದಲ್ಲಿ ಮೂರನೇ ಬಾರಿ ಚಿನ್ನದ ಸಾಧನೆ ಮಾಡಿದ್ದಾರೆ.
54 ಕೆಜಿ ವಿಭಾಗದಲ್ಲಿ ಭಾರತದಲ್ಲಿ ಮನಿಷಾ ರಜತ ಪದಕ ಗಳಿಸಿಕೊಂಡಿದ್ದಾರೆ.
ಕಜಕಿಸ್ತಾನದ ಎಜೀರಿಮ್ ಕಸ್ಸನಾಯೇವ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಿದ ಮೇರಿ ಪಂದ್ಯಾವಳಿ ಅಂತಿಮ ಸುತ್ತಿನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.
ಈ ವರ್ಷ ದೆಹಲಿಯಲ್ಲಿ ಇಂಡಿಯಾ ಓಪನ್ ಹಾಗೂ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ ನಲ್ಲಿ ಸಹ ಮೇರಿ ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದರು.
ಇನ್ನುಳಿದಂತೆ ಭಾರತದ ಭರವಸೆಯ ಬಾಕ್ಸರ್ ಗಳಾದ ಎಲ್ ಸರಿತ ದೇವಿ,  ರಿತು ಗ್ರೆವಲ್, ಲೊವ್ಲಿನಾ ಬೊರ್ಗೊಯ್ನ್ ಮತ್ತು ಪೂಜಾ ರಾಣಿ ಕ್ರಮವಾಗಿ 60,51,69 ಮತ್ತು 81 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಯುವ ವಿಭಾಗದಲ್ಲಿ ಭಾರತದ ಜ್ಯೋತಿ ಗುಲಿಯಾ 51 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗಳಿಸಿದ್ದಾರೆ.ಅದರೊಡನೆ ಅರ್ಜೇಂಟೀನಾದಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿದ್ದಾರೆ.
SCROLL FOR NEXT