ಕ್ರೀಡೆ

ರೈತನ ಮಗಳ ಪ್ರಸಿದ್ಧಿ, ಚಿನ್ನದ ಹುಡುಗಿ 'ಹಿಮಾದಾಸ್' ಹೆಸರು ಅಡಿಡಾಸ್ ಶೂ ಮೇಲೆ: ಫೋಟೋ ವೈರಲ್

Vishwanath S
ನವದೆಹಲಿ: ರೈತನ ಮಗಳು ಹಿಮಾ ದಾಸ್ ಭಾರತೀಯ ಅಥ್ಲೆಟಿಕ್ಸ್ ನಲ್ಲಿ ಸಂಚಲನ ಮೂಡಿಸಿದ್ದಾರೆ. 
ಅಂಡರ್ 20 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬಳಿಕ ಏಷ್ಯನ್ ಗೇಮ್ಸ್ ನಲ್ಲಿ 2 ಪದಕ ಗೆದ್ದ ಹಿಮಾಗಾಗಿ ಪ್ರತಿಷ್ಠಿತ ಕ್ರೀಡಾ ಉತ್ಪನ್ನಗಳ ಕಂಪನಿ ಅಡಿಡಾಸ್ ವಿಶೇಷ ಶೂ ಸಿದ್ಧಪಡಿಸಿದೆ. 
ಅಡಿಡಾಸ್ ಹಿಮಾದಾಸ್ ಗೆ ನೀಡಿರುವ ಶೂಟ್ ಮೇಲೆ ಹೆಸರು ದಾಖಲಿಸಲಾಗಿದ್ದು ಮತ್ತೊಂದು ಕಡೆಯಲ್ಲಿ ಇತಿಹಾಸ ರಚಿಸಲು ಇಲ್ಲಿದ್ದೇನೆ ಎಂಬ ಶೀರ್ಷಿಕೆ ಹಾಕಲಾಗಿದೆ. 
ಅಸ್ಸಾಂನ ಕುಗ್ರಾಮವೊಂದರ ಗದ್ದೆಗಳಲ್ಲಿ ಓಡುತ್ತಿದ್ದ ಹಿಮಾ ಈಗ ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಲೆ ಹಿಮಾರ ಹೊಸ ಅಡಿಡಾಸ್ ಶೂ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಫೋಟೋಗಲು ವೈರಲ್ ಆಗಿವೆ. 
SCROLL FOR NEXT