ನ್ಯೂಯಾರ್ಕ್: ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಇದಕ್ಕಾಗಿ ತಾವು ಟಾಪ್ಲೆಸ್ ಆಗಿ ಹಾಡು ಹಾಡಿದ್ದ ವೀಡಿಯೋ ಒಂದನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಲುವಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಸೆರೆನಾ 1991ರಲ್ಲಿ ಆಸ್ಟ್ರೇಲಿಯನ್ ಬ್ಯಾಂಡ್ನ ಸ್ತನ ಕ್ಯಾನ್ಸರ್ ಕುರಿತ “ಐ ಟಚ್ ಮೈಸೆಲ್ಫ್” ಹಾಡನ್ನು ಹಾಡಿದ್ದಾರೆ.
"ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾದ ಈ ತಿಂಗಳಿನಲ್ಲಿ ನಾನು ಮಹಿಳೆಯರು ತಮ್ಮ ಸ್ತನಗಳ ಆರೋಗ್ಯವನ್ನು ನಿಯಮಿತವಾಗಿ ಸ್ವಯಂ ಪರೀಕ್ಷಿಸಿಕೊಳ್ಳುವ ಕುರಿತು ನೆನಪಿಸಲು ಜಗದ್ವಿಖ್ಯಾತವಾದ ‘ಐ ಟಚ್ ಮೈಸೆಲ್ಫ್’ ಗೀತೆಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದೇನೆ.
"ಹೌದು, ಇದು ನನ್ನನ್ನು ನನ್ನ ಸುರಕ್ಷಾ ವಲಯದಿಂದ ಬೇರ್ಪಡಿಸಿದೆ. ಆದರೆ ಎಲ್ಲಾ ಬಣ್ಣಗಳ ಎಲ್ಲಾ ದೇಶಗಳ ಎಲ್ಲಾ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವದಕ್ಕಾಗಿ ನಾನಿದನ್ನು ಮಾಡಲು ಬಯಸಿದ್ದೇನೆ.ಪ್ರಾಥಮಿಕ ಹಂತದಲೇ ರೋಗವನ್ನು ಪತ್ತೆ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದನ್ನು ನಾನು ಅಂತಹಾ ಮಹಿಳೆಯರಿಗೆ ನೆನಪಿಸಲು ಬಯ್ಸುತ್ತೇನೆ" ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮ್ಯೂಸಿಕ್ ವೀಡಿಯೋ ಇಚ್ ಟಚ್ ಮೈಸೆಲ್ಫ್ ಪ್ರಾಜೆಕ್ಟ್ ನ ಭಾಗವಾಗಿದೆ.ಇದು ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಸಾವನ್ನಪ್ಪಿದ್ದ ಪ್ರಸಿದ್ದ ತಾರೆ ಕ್ರಿಸ್ಸಿ ಆಮ್ಫ್ಲೆಟ್, ಅವರ ಗೌರವಾರ್ಥವಾಗಿ ರಚಿಸಲ್ಪಟ್ಟಿತು, ಆಮ್ಫ್ಲೆಟ್ 2013 ರಲ್ಲಿ 53 ನೇ ವಯಸ್ಸಿನಲ್ಲಿ ನಿಧನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics