ಬ್ಯೂನಸ್ ಐರಿಸ್: ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ವಿರುದ್ಧ ಮೂರು ತಿಂಗಳ ಕಾಲ ನಿಷೇಧ ವಿಧಿಸಲಾಗಿದೆ.
ದಕ್ಷಿಣ ಅಮೆರಿಕಾದ ಫುಟ್ಬಾಲ್ ಆಡಳಿತ ಮಂಡಳಿಯನ್ನು ತೀವ್ರವಾಗಿ ಟೀಕಿಸಿದ್ದಕ್ಕಾಗಿ ಮೆಸ್ಸಿಯ ಮೇಲೆ ನಿಷೇಧ ವಿಧಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಜೂನ್ ಮತ್ತು ಜುಲೈನಲ್ಲಿ ಬ್ರೆಜಿಲ್ ನಲ್ಲಿ ನಡೆದ ಕೋಪಾ ಅಮೇರಿಕಾ ಕಪ್ ಟೂರ್ನಿ ಭಾಗವಾಗಿ ದಕ್ಷಿಣ ಅಮೆರಿಕಾದ ಫುಟ್ಬಾಲ್ ಆಡಳಿತ ಮಂಡಳಿಯನ್ನು ಮೆಸ್ಸಿ ತೀವ್ರವಾಗಿ ಟೀಕಿಸಿದ್ದರು.