ಕ್ರೀಡೆ

ಡಬ್ಲ್ಯುಡಬ್ಲ್ಯುಇಗೆ ವಿದಾಯ ಹೇಳಿದ 'ದಿ ರಾಕ್''

Raghavendra Adiga
ನವದೆಹಲಿ: 'ದಿ ರಾಕ್'  ಎಂದೇ ಜನಜನಿತರಾದ ಡ್ವೇನ್ ಜಾನ್ಸನ್ ಅವರು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ಯಿಂದ ನಿವೃತ್ತಿಯಾಗುತ್ತಿರುವುದಾಗಿ ಘೊಷಿಸಿದ್ದಾರೆ.
ಹಾಲಿವುಡ್ ನಟರಾಗಿದ್ದ ಡ್ವೇನ್ ಡಬ್ಲ್ಯುಡಬ್ಲ್ಯುಇ ಕುಸ್ತಿಪಟುವಾಗಿ ಬದಲಾಗಿದ್ದು ಇದೀಗ ಸದ್ದಿಲ್ಲದೆ ನಿವೃತ್ತರಾಗುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಮತ್ತೆ ಡಬ್ಲ್ಯುಡಬ್ಲ್ಯುಇ ಅಂಗಳಕ್ಕೆ ಮರಳುವುದನ್ನು ಅವರು ತಳ್ಳಿ ಹಾಕುವುದಿಲ್ಲ.
ವಿಶೇಷವೆಂದರೆ ವೃತ್ತಿಪರ ಕುಸ್ತಿಪಟು ಕ್ರೀಡೆಯಿಂದ ನಿವೃತ್ತಿ ಹೊಂದುವುದಾಗಿ ಹೇಳಿಕೊಂಡಿರುವುದು ಇದು ಮೊದಲ ಬಾರಿಯಾಗಿದೆ. 'ಲೈವ್ ವಿತ್ ಕೆಲ್ಲಿ ಮತ್ತು ರಯಾನ್ ಇನ್ ದಿ ಸ್ಟೇಟ್ಸ್' ಎಂಬ ಚಾಟ್ ಶೋವೊಂದರಲ್ಲಿ ಮಾತನಾಡಿದ ಜಾನ್ಸನ್, "ನಾನು ಕುಸ್ತಿಯನ್ನು ಕಳೆದುಕೊಳ್ಳುತ್ತೇನೆ., ನಾನು ಕುಸ್ತಿಯನ್ನು ಪ್ರೀತಿಸುತ್ತೇನೆ. ನಾನು ಅದ್ಭುತ ವೃತ್ತಿಜೀವನವನ್ನು ಹೊಂದಲು ಮತ್ತು ನಾನು ಬಯಸಿದ್ದನ್ನು ಸಾಧಿಸಲು ಇಲ್ಲಿ ಸಾಧ್ಯವಾಗಿದೆ. ಆ ರೀತಿಯಲ್ಲಿ ನೋಡಿದರೆ ನಾನೊಬ್ಬ ಅದೃಷ್ಟಶಾಲಿ. " ಎಂದಿದ್ದಾರೆ.
ಅವರ ಕೊನೆಯ ಅಧಿಕೃತ ಪಂದ್ಯವು 2016 ರಲ್ಲಿ ರೆಸಲ್ಮೇನಿಯಾ 32 ರಲ್ಲಿ ನಡೆಯಿತು, ಅಲ್ಲಿ ಅವರು ವ್ಯಾಟ್ ಬ್ರದರ್ಸ್‌ನ ಅರ್ಧ ಪಂದ್ಯವನ್ನು ಸೋಲಿಸಿದ್ದರು.
ಕಳೆದ ವಾರ, ತಮ್ಮ ಹೊಸ ಚಿತ್ರ 'ಫಾಸ್ಟ್ & ಫ್ಯೂರಿಯಸ್ ಪ್ರೆಸೆಂಟ್ಸ್: ಹಾಬ್ಸ್ & ಶಾ' ಪ್ರಚಾರದಲ್ಲಿ ನಿರತರಾಗಿರುವ 47 ವರ್ಷದ, ಫೋರ್ಬ್ಸ್ 2019 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹೆಸರಿಸಲ್ಪಟ್ಟಿದೆ. 
""ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿನ ಡಬ್ಲ್ಯುಡಬ್ಲ್ಯುಇ  ಯಲ್ಲಿ ನನ್ನ ಮೊದಲ ಪಂದ್ಯವನ್ನು ಆಡಿದ್ದೆ" ಎಂದು ಅವರು ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಿಸಿಕೊಂಡಿದ್ದಾರೆ.
SCROLL FOR NEXT