ಸಂಗೀತಾ ಪೋಗಟ್ , ಬಜರಂಗ್ ಪುನಿಯಾ
ಚಂಡಿಘರ್: ವಿಶ್ವದ ನಂಬರ್ ಒನ್ ಕುಸ್ತಿಪಟು ಬಜರಂಗ್ ಪುನಿಯಾ ಶೀಘ್ರವೇ ವಿವಾಹವಾಗಲಿದ್ದಾರೆ. ಖ್ಯಾತ ಕುಸ್ತಿ ಪಟುಗಳ ಕುಟುಂಬವಾದ ಪೋಗಟ್ ಕುಟುಂಬದ ಕುಡಿ ಸಂಗೀತಾ ಪೋಗಟ್ ಅವರನ್ನು ವರಿಸಲಿದ್ದಾರೆ ಎಂದು ಕುಟುಂಬ ಮೂಲಗಳು ಗುರುವಾರ ತಿಳಿಸಿವೆ.
ಟೋಕಿಯೊದಲ್ಲಿ ನಡೆವ 2020 ರ ಒಲಿಂಪಿಕ್ಸ್ ನಂತರ ವಿವಾಹ ಸಮಾರಂಭ ನಡೆಯುವ ಸಾಧ್ಯತೆ ಇದೆ.
65 ಕೆಜಿ ವಿಭಾಗದ ಕುಸ್ತಿಪಟು ಬಜರಂಗ್ ಮತ್ತು 59 ಕೆಜಿ ತೂಕ ವಿಭಾಗದಲ್ಲಿ ರಾಷ್ಟ್ರೀಯ ಪದಕ ವಿಜೇತೆಯಾಗಿರುವ ಸಂಗೀತಾ - ತಮ್ಮ ಕುಟುಂಬಗಳಿಗೆ ಮದುವೆಯಾಗುವ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಫೋಗಟ್ ಕುಟುಂಬದ ಸದಸ್ಯರೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಸಂಗೀತಾ ತಂದೆ ಮಹಾವೀರ್ ಸಿಂಗ್ ಮಾಧ್ಯಮಗಳಿಗೆ ಈ ಬಗೆಗೆ ತಿಳಿಸಿದ್ದು ಇದು ಮಕ್ಕಳ ಆಶಯ ಮತ್ತು "ನಾವು ಅವರ ಭಾವನೆಗಳನ್ನು ಗೌರವಿಸುತ್ತೇವೆ". ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos