ಕ್ರೀಡೆ

'ಖೇಲ್ ರತ್ನ' ಪ್ರಶಸ್ತಿಗೆ ದೀಪಾ ಮಲ್ಲಿಕ್ , ಅರ್ಜುನ ಪ್ರಶಸ್ತಿಗೆ ಜಡೇಜಾ ಹೆಸರು ಶಿಫಾರಸು

Nagaraja AB

ನವದೆಹಲಿ: ಈ ಬಾರಿಯ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿಗೆ  ಕುಸ್ತಿ ಪಟು ಬಜರಂಗ್ ಪುನಿಯಾ ಜೊತೆಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದ  ದೀಪಾ ಮಲ್ಲಿಕ್ ಅವರ ಹೆಸರನ್ನು  ನಾಮನಿರ್ದೇಶನ ಮಾಡಲಾಗಿದೆ. 

48 ವರ್ಷದ ದೀಪಾ ಮಲ್ಲಿಕ್ 2016ರ ರಿಯೋ ಪ್ಯಾರಾಲಿಂಪಿಕ್ಸ್ ಟೂರ್ನಿಯಲ್ಲಿ ಶಾಟ್ ಪುಟ್ ಎಫ್ 53 ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು.  12 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯ ಸಭೆಯಲ್ಲಿ ದೀಪಾ ಮಲ್ಲಿಕ್ ಹೆಸರನ್ನು ಶಿಫಾರಸು ಮಾಡಲಾಗಿದೆ.  ಶುಕ್ರವಾರ ನಡೆದ ಸಭೆಯಲ್ಲಿ 65 ಕೆಜಿ ವಿಭಾಗದಲ್ಲಿ ನಂಬರ್ 1 ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. 

ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ, ಪೂನಮ್ ಯಾದವ್ , ಟ್ರ್ಯಾಕ್ ಮತ್ತು ಫೀಲ್ಡ್ ಸ್ಟಾರ್ಸ್ ತೆಜಿಂದರ್ ಪಾಲ್ ಸಿಂಗ್ ತೊರ್, ಮೊಹಮ್ಮದ್ ಅನಾಸ್ ,ಸ್ವಪ್ನಾ ಬರ್ಮನ್, ಪುಟ್ಬಾಲ್ ಆಟಗಾರ ಗುರು ಪ್ರೀತ್ ಸಿಂಗ್ ಸಂಧು, ಹಾಕಿ ಆಟಗಾರ ಸಿ.ಎಸ್, ಕಂಗುಜಾಮ್ , ಶೂಟರ್ ಅಂಜಮ್ ಮೌದ್ಗಿಲ್ ಅವರನ್ನು ಅರ್ಜುನ ಪ್ರಶಸ್ತಿಗೆ ಈ ಸಮಿತಿ ಶಿಫಾರಸು ಮಾಡಿದೆ.

ಮಾಜಿ ಬ್ಯಾಡ್ಮಿಂಟನ್ ಆಟಗಾರ ವಿಮಲ್ ಕುಮಾರ್ ಸೇರಿದಂತೆ ಮೂವರು ಕ್ರೀಡಾಪಟುಗಳ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. 

SCROLL FOR NEXT