ಹಿಮಾದಾಸ್, ಮೊಹಮ್ಮದ್ ಅನಸ್ 
ಕ್ರೀಡೆ

ಅಥ್ಲೆಟಿಕ್ ಮಿಟಿಂಕ್ ರೀಟರ್ ಕ್ರೀಡಾಕೂಟದಲ್ಲಿ ಹಿಮಾ, ಮೊಹಮ್ಮದ್ ಅನಸ್ ಗೆ ಚಿನ್ನ 

ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಕ್ ರೀಟರ್ ಸ್ಪರ್ಧೆಯಲ್ಲಿ ಭಾರತೀಯ ಓಟಗಾರರಾದ ಹಿಮಾದಾಸ್ ಮತ್ತು ಮೊಹಮ್ಮದ್ ಅನಸ್ ಕ್ರಮವಾಗಿ ಮಹಿಳಾ ಮತ್ತು ಪುರುಷರ 300 ಮೀಟರ್ ಓಟದಲ್ಲಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದಾರೆ

ನವದೆಹಲಿ: ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಕ್ ರೀಟರ್ ಸ್ಪರ್ಧೆಯಲ್ಲಿ ಭಾರತೀಯ ಓಟಗಾರರಾದ ಹಿಮಾದಾಸ್ ಮತ್ತು ಮೊಹಮ್ಮದ್ ಅನಸ್ ಕ್ರಮವಾಗಿ ಮಹಿಳಾ ಮತ್ತು ಪುರುಷರ 300 ಮೀಟರ್ ಓಟದಲ್ಲಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಜುಲೈ 2ರಿಂದ ಯುರೋಪಿಯನ್ ರೇಸ್ ಗಳಲ್ಲಿ ಇದು ಹಿಮಾದಾಸ್ ಅವರ ಆರನೇ ಚಿನ್ನದ ಪದಕವಾಗಿದೆ. 

ಜೆಕ್ ಗಣರಾಜ್ಯದಲ್ಲಿ ಇಂದು ನಡೆದ ಅಥ್ಲೆಟಿಕ್ ಮಿಟಿಂಕ್ ರೀಟರ್  2019ರಲ್ಲಿ 300 ಮೀಟರ್ ಓಟದಲ್ಲಿ ಅಗ್ರಸ್ಥಾನ ಗಳಿಸಿರುವುದಾಗಿ ಹಿಮಾ ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ರಾಷ್ಟ್ರೀಯ ದಾಖಲೆ ಹೊಂದಿರುವ ಅನಸ್ 32. 41 ಸೆಕೆಂಡುಗಳಲ್ಲಿ ಪುರುಷರ 300 ಮೀಟರ್ ಓಟದಲ್ಲಿ ಗೆಲುವಿನ ನಗೆ ಬೀರಿದರು. ಚಿನ್ನ ಗೆದ್ದಿರುವುದಕ್ಕೆ ಸಂತೋಷವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ದೋಹಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪಾಗ್ ಗಾಗಿ ಅನಸ್ ಈಗಾಗಲೇ 400 ಮೀಟರ್ ಓಟಕ್ಕೆ ಅರ್ಹತೆ ಪಡೆದಿದ್ದರೆ , ಹಿಮಾ ಇನ್ನಷ್ಟೇ ಅರ್ಹತೆ ಪಡೆಯಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT