ಕ್ರೀಡೆ

ಪ್ರೊ ಕಬಡ್ಡಿ: ಜೈಪುರ್ ಗೆ ಶಾಕ್ ನೀಡಿದ ಯು.ಪಿ ಯೋಧಾ

Srinivas Rao BV

ಚೆನ್ನೈ: ಪ್ರೊ ಕಬಡ್ಡಿ ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಯು ಪಿ ಯೋಧಾ ಗೆಲುವಿನ ನಗೆ ಬೀರಿದೆ. 

ಸೋಮವಾರ ನಡೆದ ಪಂದ್ಯದಲ್ಲಿ ಯು ಪಿ ಪರ ಸುರೇಂದ್ರ ಗಿಲ್ ಹಾಗೂ ಶ್ರೀಕಾಂತ್ ಜಾದವ್ ಉತ್ತಮ ಪರ್ದರ್ಶನ ನೀಡಿ ಅಂಕಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದರು. ಜೈಪುರ್ ಪರ ದೀಪಕ್ ಹೂಡ 9 ಅಂಕಗಳನ್ನು ಕಲೆ ಹಾಕಿದರೂ, ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಎದುರಾಳಿ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡಿದ ಯು ಪಿ ಅರ್ಹ ಗೆಲುವು ದಾಖಲಿಸಿತು.

SCROLL FOR NEXT