ಒಲಿಂಪಿಕ್ಸ್ ಟೆಸ್ಟ್: ಚೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ ಫೈನಲ್ ಗೆ 
ಕ್ರೀಡೆ

ಒಲಿಂಪಿಕ್ಸ್ ಟೆಸ್ಟ್: ಚೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ ಫೈನಲ್ ಗೆ

ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಚೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ.

ಟೋಕಿಯೊ: ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆದಿರುವ ಒಲಿಂಪಿಕ್ಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಚೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ.  ಭಾರತದ ಪೆನಾಲ್ಟಿ ಕಾರ್ನರ್ ನುರಿತೆ ಗುರ್ಜಿತ್ ಕೌರ್ ಚಾಣಕ್ಯ ನಡೆ ಪ್ರದರ್ಶಿಸಿದರೂ, ಚೀನಾ ಗೋಲಿ ಕಣ್ಣು ತಪ್ಪಿಸಲು ಆಗಲಿಲ್ಲ. ಈ ಅವಧಿಯಲ್ಲಿ ಚೀನಾ ಭಾರತದ ಮೇಲೆ ಒತ್ತಡ ಹೇರುವ ಆಸೆ ಹೆಣೆದುಕೊಂಡಿತು. ಅಲ್ಲದೆ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೂ, ಮೊದಲಾವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ. 

ಭಾರತ ಎರಡನೇ ಅವಧಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಆದರೆ, 17ನೇ ನಿಮಿಷದಲ್ಲಿ ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ. ಮೂರನೇ ಅವಧಿಯಲ್ಲಿ ಚೀನಾ ಆಕ್ರಮಣಕಾರಿ ಆಟವನ್ನು ಆಡುವ ಮೂಲಕ ಅಂಕ ಗಳಿಸುವ ಯೋಜನೆಯನ್ನು ಹೆಣೆದುಕೊಂಡಿತು. ಆದರೆ, 41ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ನೀಡದಂತೆ ತಡೆಯುವಲ್ಲಿ ಭಾರತದ ಗೋಲ್ ಕೀಪರ್ ಸವಿತಾ ಸಫಲರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT