ಕ್ರೀಡೆ

ದಕ್ಷಿಣ ಏಷ್ಯನ್‌ ಕ್ರೀಡಾಕೂಟ: ಭಾರತದ ಖಾತೆಗೆ 214 ಪದಕಗಳು

Srinivas Rao BV

ಕಠ್ಮಂಡು: ಆರನೇ ದಿನವೂ ಪಾರಮ್ಯ ಸಾಧಿಸಿದ ಭಾರತದ ಕ್ರೀಡಾಪಟುಗಳು ಇಲ್ಲಿ ನಡೆಯುತ್ತಿರುವ 13ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಪದಕಗಳ ಸಂಖ್ಯೆಯನ್ನು 200ರ ಗಡಿ ದಾಟಿಸಿದ್ದಾರೆ. ಪದಕ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿದೆ.

ಶನಿವಾರ ಭಾರತ 29 ಚಿನ್ನದ ಪದಕಗಳು ಸೇರಿದಂತೆ ಒಟ್ಟು 49 ಪದಕಗಳನ್ನು ಮುಡಿಗೇರಿಸಿಕೊಂಡಿತು. ಆರನೇ ದಿನದ ಮುಕ್ತಾಯಕ್ಕೆ ಭಾರತ 214 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಇದರಲ್ಲಿ 110 ಚಿನ್ನ, 69 ಬೆಳ್ಳಿ ಹಾಗೂ 35 ಕಂಚಿನ ಪದಕಗಳು ಒಳಗೊಂಡಿವೆ. ಎರಡನೇ ಸ್ಥಾನದಲ್ಲಿರುವ ನೇಪಾಳ 142 ಪದಕಗಳನ್ನು ತನ್ನ ಖಾತೆಗೆ ಸೇರಿಸಿದೆ. ಇದರಲ್ಲಿ 43 ಚಿನ್ನ,  34 ಬೆಳ್ಳಿ ಹಾಗೂ 65 ಕಂಚಿನ ಪದಕಗಳು ಇವೆ.
 

SCROLL FOR NEXT