ಲಿಯೊನೆಲ್‌ ಮೆಸ್ಸಿ 
ಕ್ರೀಡೆ

ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಲಿಯೊನೆಲ್ ಮೆಸ್ಸಿ 

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೊನೆಲ್‌ ಮೆಸ್ಸಿ ಅವರು ವೃತ್ತಿ ಜೀವನದ 35ನೇ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮುರಿದರು

ಮ್ಯಾಡ್ರಿಡ್‌ : ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೊನೆಲ್‌ ಮೆಸ್ಸಿ ಅವರು ವೃತ್ತಿ ಜೀವನದ 35ನೇ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮುರಿದರು. ಶನಿವಾರ ತಡರಾತ್ರಿ ಲಾ ಲೀಗಾ ಟೂರ್ನಿಯ ಆರ್‌ಸಿಡಿ ಮಲ್ಲೋರ್ಕಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಸಾಧನೆ ಮಾಡಿದರು.

 17, 41 ಹಾಗೂ 83ನೇ ನಿಮಿಷಗಳಲ್ಲಿ ಮೆಸ್ಸಿ ಗೋಲು ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದರು. ಇವರಿಗೆ ಸಾಥ್‌ ನೀಡಿದ್ದ ಅಂಟೋನಿ ಗ್ರೀಜ್ಮನ್‌ 7ನೇ ನಿಮಿಷದಲ್ಲಿ ಬಾರ್ಸಿಲೋನಾಗೆ ಗೋಲಿನ ಖಾತೆ ತೆರೆದಿದ್ದರು. 

ಲೂಯಿಸ್‌ ಸೂರೆಜ್‌ ಕೂಡ 43ನೇ ನಿಮಿಷದಲ್ಲಿ ಏಕೈಕ ಗೋಲಿನ ಕೊಡುಗೆ ನೀಡಿದ್ದರು.ಮೆಸ್ಸಿ ಅವರು ಲಾ ಲೀಗಾ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್‌ ಸಿಡಿಸಿದ ಮೊದಲ ಆಟಗಾರರಾಗಿದ್ದಾರೆ. 

ರೊನಾಲ್ಡೊ ಅವರು 34 ಬಾರಿ ಲಾ ಲೀಗಾ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಬಾರಿಸಿದ್ದಾರೆ. ರೊನಾಲ್ಡೊ ಕಳೆದ ಆವೃತ್ತಿಯಲ್ಲೇ ರಿಯಲ್‌ ಮ್ಯಾಡ್ರಿಡ್‌ ತೊರೆದು ಜುವೆಂಟಾಸ್‌ ಸೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರಾಹಕರೇ ಎಚ್ಚರೇ... Gas crisis ನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಸೈಬರ್ ವಂಚಕರು: ಈ ಬಗ್ಗೆ ತಿಳಿದಿರಬೇಕಾದ ಮಾಹಿತಿ ಇದು...

ದೇಶದಲ್ಲಿ ವಾಣಿಜ್ಯ LPG ಸಿಲಿಂಡರ್ ಕೊರತೆ: ಬಿಜೆಪಿ ಸೃಷ್ಟಿಸಿದ ಬಿಕ್ಕಟ್ಟು- ಪ್ರಿಯಾಂಕ್ ಖರ್ಗೆ ಕಿಡಿ!

ಇರಾನ್‌ನ 'ಮುಕುಟ'ದಂತಿದ್ದ ಖಾರ್ಗ್ ಮೇಲೆ ಬಾಂಬ್ ದಾಳಿ: ದ್ವೀಪ ಸಂಪೂರ್ಣ ಧ್ವಂಸ; ಮಾಹಿತಿ ಹಂಚಿಕೊಂಡ ಟ್ರಂಪ್

ಟ್ರಂಪ್ ಎಚ್ಚರಿಕೆಗೆ ತಲೆಬಾಗದ ಇರಾನ್​: ಸೌದಿ ನೆಲೆಯಲ್ಲಿ ಕ್ಷಿಪಣಿ ದಾಳಿ; ಅಮೆರಿಕಾದ 5 ಟ್ಯಾಂಕರ್ ವಿಮಾನಗಳಿಗೆ ಹಾನಿ..!

ಮಂಡಿಯೂರಿದ ಕೇಂದ್ರ ಸರ್ಕಾರ: ಜೈಲಿನಲ್ಲಿದ್ದ Sonam Wangchuk ಗೆ ಕೊನೆಗೂ ಬಂಧನದಿಂದ ಮುಕ್ತಿ: ಕೇಂದ್ರ ಹೇಳಿದ್ದೇನು?

SCROLL FOR NEXT