ಕ್ರೀಡೆ

ವೇಯ್ಟ್ ಲಿಫ್ಟರ್ ಸೀಮಾಗೆ ನಾಲ್ಕು ವರ್ಷಗಳ ಅಮಾನತು ಶಿಕ್ಷೆ

Srinivasamurthy VN

ನವದೆಹಲಿ: ಕಾಮನ್‌ವೆಲ್ತ್‌ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತೆ ಭಾರತದ ವೇಟ್‌ಲಿಪ್ಟರ್ ಸೀಮಾ ಅವರು ಡೋಪಿಂಗ್ ನಿಯಮ ಉಲ್ಲಂಘಿಸಿದ್ದರಿಂದ ನಾಲ್ಕು ವರ್ಷಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ಹೇಳಿಕೆ ಪ್ರಕಾರ, ‘‘ ಪ್ರಸಕ್ತ ವರ್ಷ ವಿಶಾಖಪಟ್ಟಣಂದಲ್ಲಿ ನಡೆದಿದ್ದ 34ನೇ ರಾಷ್ಟ್ರೀಯ ವೇಟ್‌ ಲಿಫ್ಟಿಂಗ್  ಚಾಂಪಿಯನ್‌ಶಿಪ್‌ನಲ್ಲಿ ಅವರ ಮಾದರಿಯನ್ನು ಸಂಗ್ರಹಿಸಲಾಗಿತ್ತು. 

ಪ್ರಯೋಗಾಲಯದಲ್ಲಿ ಅವರ ಮಾದರಿಯು ಉದ್ದೀಪನಾ ಮದ್ದು ಸೇವನೆ ಮಾಡಿರುವುದು ಧೃಡಪಟ್ಟಿದೆ. ಈ ಹಿನ್ನೆೆಲೆಯಲ್ಲಿ ಅವರನ್ನು ನಾಲ್ಕು ವರ್ಷಗಳ ಕಾಲ ವೇಟ್‌ ಲಿಫ್ಟಿಂಗ್ ನಿಂದ ಅಮಾನತು ಶಿಕ್ಷಗೆ ಒಳಪಡಿಸಲಾಗಿದೆ,’’ ಎಂದು ತಿಳಿಸಿದೆ. 

ಕಳೆದ 2017 ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸೀಮಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. 2018ರ ಗೋಲ್ಡ್ಕೋಸ್ಟ್‌ ಕ್ರೀಡಾಕೂಟದಲ್ಲಿ ಮಹಿಳೆಯರ 75 ಕೆ.ಜಿ ವಿಭಾಗದ ವೇಟ್‌ ಲಿಫ್ಟಿಂಗ್ ನಲ್ಲಿ ಆರನೇ ಸ್ಥಾನ ಪಡೆದಿದ್ದರು.
 

SCROLL FOR NEXT