ಕ್ರೀಡೆ

ನಕಲಿ ಜಾತಿ ಪ್ರಮಾಣ ಪತ್ರ: ಭಾರತ ಹಾಕಿ ತಂಡದ ಮಾಜಿ ನಾಯಕ ಮುಖೇಶ್‌ ಕುಮಾರ್ ವಿರುದ್ಧ ಎಫ್‌ಐಆರ್‌

Raghavendra Adiga
ಹೈದರಾಬಾದ್‌: ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಮೇಲೆ ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅರ್ಜುನ್‌ ಪ್ರಶಸ್ತಿ ಪುರಷ್ಕೃತ ಎನ್. ಮುಖೇಶ್‌ ಕುಮಾರ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 
ಎಸ್‌ಸಿ ಮಲಾ ಜಾತಿ ಪ್ರಮಾಣ ಪತ್ರವನ್ನುಸಿಕಂದರಾಬಾದ್ ತಹಶೀಲ್ದಾರ್ ಅವರ ಕಚೇರಿಯಲ್ಲಿ ಪಡೆದಿದ್ದರು. ಈ ಸಂಬಂಧ ಕಳೆದ ಜ. 25 ರಂದೇ ಇವರ ವಿರುದ್ಧ ಬೊವೆನ್‌ಪಲ್ಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಜತೆಗೆ, ಮುಖೇಶ್‌ ಕುಮಾರ್ ಅವರ ಸಹೋದರ ಎನ್‌. ಸುರೇಶ್‌ ಕುಮಾರ್‌ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ ಎಂದು ಠಾಣೆಯ ಎಸ್‌ಎಚ್‌ಒ ರಾಜೇಶ್‌ ಮಾಹಿತಿ ನೀಡಿದ್ದಾರೆ. 
ಎನ್. ಮುಖೇಶ್‌ ಕುಮಾರ್‌ ಅವರು ಭಾರತ ತಂಡದ ಪರ 307 ಅಂತಾರಾಷ್ಟ್ರೀಯ ಪಂದ್ಯಗಳಾಡಿದ್ದು, ಒಟ್ಟು 80 ಗೋಲು ಗಳಿಸಿದ್ದಾರೆ. ಇವರು ಮೂಲತಃ ಬ್ರಾಹ್ಮಿನ್‌ ಸಮುದಾಯಕ್ಕೆ ಸೇರಿದ್ದವರಾಗಿದ್ದು, ಏರಲೈನ್ಸ್‌ ಹುದ್ದೆಗಾಗಿ ನಕಲಿ ಎಸ್‌ಸಿ ಪ್ರಮಾಣ ಪತ್ರ ಪಡೆದಿದ್ದರು.
SCROLL FOR NEXT