ಕ್ರೀಡೆ

ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಫಿಯನ್ ಶಿಪ್ :ಪಿ. ವಿ.ಸಿಂಧು ಫೈನಲ್ ಪ್ರವೇಶ

Nagaraja AB

ಗುವಾಹಟಿ: ಗುವಾಹಟಿಯಲ್ಲಿ ಇಂದು  ನಡೆದ 83ನೇ ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಫಿಯನ್ ಶಿಫ್ ಸೆಮಿ ಫೈನಲ್ಸ್ ಪಂದ್ಯದಲ್ಲಿ  ಪ್ರಬಲ ಪೈಪೋಟಿ ನೀಡಿದ ಅಸ್ಸಾಂನ ಅಸ್ಮಿತಾ ಚಾಲಿಹ  ಅವರನ್ನು ಸೋಲಿಸಿದ ಪಿ. ವಿ. ಸಿಂಧು  ಫೈನಲ್ ಪ್ರವೇಶಿಸಿದ್ದಾರೆ.

ಎರಡನೇ ಗೇಮ್ ನಲ್ಲಿ 16-19 ರಿಂದ ಹಿಂದೆ ಬಿದಿದ್ದ ಪಿ. ವಿ. ಸಿಂಧು,  38 ನೇ ನಿಮಿಷದಲ್ಲಿ 10-21, 20-22 ನೇರ  ಗೇಮ್ ಗಳಿಂದ ಚಾಲಿಹ ಅವರನ್ನು  ಮಣಿಸಿ, ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ. 18 ವರ್ಷದ ಚಾಲಿಹ ಅವರ ಮನಮೋಹಕ ಆಟ ಕ್ರೀಡಾಸಕ್ತರ ಗಮನ ಸೆಳೆಯಿತು.

ಆರಂಭದಲ್ಲಿ ನಿಧಾನಗತಿಯ ಆಟ ಪ್ರದರ್ಶಿಸಿದ ಚಾಲಿಹ, ಎರಡನೇ ಗೇಮ್ ನಲ್ಲಿ ಉತ್ತಮ ಆಟ ಪ್ರದರ್ಶಿಸಿದರು.  ಆದಾಗ್ಯೂ, ಸೋಲನ್ನುಭವಿಸುವಂತಾಯಿತು.

ಪಿ. ವಿ. ಸಿಂಧು ಎದುರಾಳಿಯಾಗಿದ್ದರಿಂದ ಆರಂಭದಲ್ಲಿ ನರ್ವಸ್ ಆಗಿ  ಕೆಲ ತಪ್ಪುಗಳು ಆಗಿದ್ದಾಗಿ  ಪಂದ್ಯ ಮುಗಿದ ಬಳಿಕ ಚಲಿಹಾ ತಿಳಿಸಿದರು.ಅಸ್ಮಿತಾ ಚಾಲಿಹ ಅವರ ಪ್ರಗತಿ ಬಗ್ಗೆ ಸಿಂಧು ಮೆಚ್ಚುಗೆ  ವ್ಯಕ್ತಪಡಿಸಿದರು.
SCROLL FOR NEXT