ಕ್ರೀಡೆ

ದೆಹಲಿ: ವಿಶ್ವಕಪ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಪಾಕ್ ಆಟಗಾರರ ವೀಸಾಕ್ಕೆ ಅನುಮತಿ

Nagaraja AB

ನವದೆಹಲಿ: ಇದೇ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ  ಶೂಟಿಂಗ್ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸುವ ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲಾಗುವುದು ಎಂದು ರಾಷ್ಟ್ರೀಯ ರೈಪಲ್ ಅಸೋಸಿಯೇಷನ್ ಕಾರ್ಯದರ್ಶಿ ರಾಜೀವ್ ಭಾಟಿಯಾ ಸ್ಪಷ್ಪಪಡಿಸಿದ್ದಾರೆ.

ಪಾಕ್ ಆಟಗಾರರ ವೀಸಾಕ್ಕೆ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅವುಗಳನ್ನು  ಹೈಕಮೀಷನ್ ಹಾಗೂ ಇಸ್ಲಾಮಾಬಾದಿಗೆ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ಹೈಕಮೀಷನ್ ನಿಂದ ಶುಕ್ರವಾರ ಕರೆ ಮಾಡಿ ಶೂಟರ್ ಆಟಗಾರರ ಹೆಸರನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಆಟಗಾರರಿಗೆ ವೀಸಾವನ್ನು ನೀಡುವುದಾಗಿ ಭಾಟಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 20 ರಂದು ಇಬ್ಬರು ಪಾಕಿಸ್ತಾನಿ ರೈಫಲ್ ಶೂಟರ್ಸ್ ಹಾಗೂ ಒಬ್ಬ ತರಬೇತುದಾರರು ಭಾರತಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಅವರಿಗೆ  ಗೃಹ ಸಚಿವಾಲಯ ವೀಸಾ ನಿರಾಕರಿಸುತ್ತಿಲ್ಲ.ವೀಸಾ ಅನುಮತಿ ನೀಡಿದ ನಂತರ ವಿಮಾನದ ಮಾಹಿತಿ ನೀಡಲಾಗುವುದು ಎಂದು ಅವರು ನಮಗೆ  ಪತ್ರ ಬರೆದಿದ್ದಾರೆ ಎಂದು ರಾಜೀವ್ ಭಾಟಿಯಾ ಹೇಳಿದ್ದಾರೆ.

ನವದೆಹಲಿಯಲ್ಲಿ ಫೆಬ್ರವರಿ 20 ರಿಂದ 28 ರವರೆಗೂ 2019 ಶೂಟಿಂಗ್ ವಿಶ್ವಕಪ್ ನಡೆಯಲಿದೆ. ಟೊಕಿಯೊ 2020 ಒಲಿಂಪಿಕ್ಸ್  ಹಿನ್ನೆಲೆಯಲ್ಲಿ ಈ ವಿಶ್ವಕಪ್ ಮಹತ್ವ ಪಡೆದುಕೊಂಡಿದೆ.

SCROLL FOR NEXT