ಬೆಂಗಳೂರು ಬುಲ್ಸ್‌ ತಂಡದ ಸಂಭ್ರಮ 
ಕ್ರೀಡೆ

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ ಚಾಂಪಿಯನ್

ಪ್ರೊ ಕಬಡ್ಡಿ ಲೀಗ್‌(ಪಿಕೆಎಲ್‌)ನ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್,...

ಮುಂಬೈ: ಪ್ರೊ ಕಬಡ್ಡಿ ಲೀಗ್‌(ಪಿಕೆಎಲ್‌)ನ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ  ಬೆಂಗಳೂರು ಬುಲ್ಸ್, ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಂದು ಮುಂಬೈನ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿದ ಬೆಂಗಳೂರು, ಗುಜರಾತ್‌ ವಿರುದ್ಧ 5 ಪಾಯಿಂಟ್‌ಗಳ ರೋಚಕ ಗೆಲುವು ದಾಖಲಿಸಿದೆ.
ಬೆಂಗಳೂರು ಬುಲ್ಸ್ 38-33 ಅಂಕಗಳ ಅಂತರದಿಂದ ಗುಜರಾತ್ ತಂಡವನ್ನು ಮಣಿಸಿತು. ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 22 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿಯಾದರು.
ಚೊಚ್ಚಲ ಪ್ರೊ ಕಬಡ್ಡಿ ಪ್ರಶಸ್ತಿ ಪಡೆದ ಬೆಂಗಳೂರು ತಂಡಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು,  ಪ್ರಶಸ್ತಿ ವಿತರಣಾ ಸಮಾರಂಭದಲ್ಲೂ ಇದೇ ಮೊದಲ ಬಾರಿ ಪ್ರಶಸ್ತಿ ಪಡೆದ ಬೆಂಗಳೂರು ತಂಡವನ್ನು ಪ್ರಶಂಸಿಸಲಾಯಿತು. 
ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ 3 ಕೋಟಿ ರು. ಬಹುಮಾನ, ರನ್ನರ್ ಅಪ್ ಗುಜರಾತ್ 1.8 ಕೋಟಿ, 3 ನೇ ಸ್ಥಾನ ಪಡೆದ ಯುಪಿ ಯೋಧಾ 1.20 ಕೋಟಿ ಮತ್ತು 4 ನೇ ಸ್ಥಾನ ಪಡೆದ ದಬಾಂಗ್ ದೆಹಲಿ 80 ಲಕ್ಷ ರು. ಬಹುಮಾನ ಪಡೆಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್