ಕ್ರೀಡೆ

ಮತ್ತೊಮ್ಮೆ ಮಿಂಚಿದ ಮೇರಿ: ಎಐಬಿಎ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತೀಯ ಬಾಕ್ಸರ್

Raghavendra Adiga
ನವದೆಹಲಿ: ಭಾರತದ ಹೆಸರಾಂತ ಮಹಿಳಾ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ ಈಗ ಮತ್ತಷ್ಟು ಎತ್ತರಕ್ಕೇರಿದ್ದಾರೆ.ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ನ ಇತ್ತೀಚಿನ ವಿಶ್ವ ಶ್ರೇಯಾಂಕಗಳಲ್ಲಿ ಮೇರಿ ಅಗ್ರ ಸ್ಥಾನಕ್ಕೆ ಏರಿದ್ದಾರೆ. ತಮ್ಮ ಆರನೇ ಬಾರಿಯ ಬಾಕ್ಸಿಂಗ್ ವಿಶ್ವಚಾಂಪಿಯನ್ ಪ್ರಶಸ್ತಿ ಗೆದ್ದ ಬಳಿಕ ಮೇರಿ ತಮ್ಮ ಶ್ರೇಯಾಂಕದಲ್ಲಿ ಬಡ್ತಿ ಹೊಂದಿದ್ದಾರೆ.
ಕಳೆದ ನವೆಂಬರ್ ನಲ್ಲಿ ದೆಹಲಿಯಲ್ಲಿ ನಡೆಇದ್ದ 48 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯ;ಲ್ಲಿ ಮಣಿಪುರಿ ಮೂಲದ ಬಾಕ್ಸಿಂಗ್ ತಾರೆ ಮೇರಿ ವಿಶ್ವ ಚಾಂಪಿಯನ್ ಆಗಿ ನೂತನ ಇತಿಹಾಸ ನಿರ್ಮಿಸಿದ್ದರು.
ಎಐಬಿಎ ಬಿಡುಗಡೆಗೊಳಿಸಿದ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಮೇರಿ 1700 ಪಾಯಿಂಟ್ ಗಳೊಡನೆ ಉನ್ನತ ಸ್ಥಾನ ಪಡೆದಿದ್ದಾರೆ. 36 ವರ್ಷದ ಮೇರಿ ಮುಂಬರುವ  2020 ಒಲಂಪಿಕ್ ಕ್ರೀಡಾಕೂಟದಲ್ಲಿ  51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಪಡೆವ ಸಿದ್ದತೆಯಲ್ಲಿದ್ದಾರೆ.
2018ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೂರು ಮಕ್ಕಳ ತಾಯಿಯ್ತಾದ ಮೇರಿ ಚಿನ್ನದ ಪದಕ ಗಳಿಸಿ ಸಂಭ್ರಮಿಸಿದ್ದರು. ಅಲ್ಲದೆ ಪ್ರತಿಷ್ಠಿತ ಸ್ಟ್ರಾಂಡ್ಜಾ ಮೆಮೋರಿಯಲ್ ನಲ್ಲಿ ಬೆಳ್ಳಿ ಪದಕ ಗಳಿಸಿಕೊಂಡಿದ್ದರು.
ಇದಲ್ಲದೆ ಎಐಬಿಎ ಶ್ರೇಯಾಂಕದಲ್ಲಿ ಪಿಂಕಿ ಜಂಗ್ರಾ (51 ಕೆಜಿ)ಎಂಟನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಏಷ್ಯಾಬೆಳ್ಳಿಯ ಪದಕ ವಿಜೇತೆ ಮನಿಶಾ ಮೌನ್ ಸಹ (54 ಕೆಜಿ) ಎಂಟನೇ ಸ್ಥಾನದಲ್ಲಿದ್ದಾರೆ.
SCROLL FOR NEXT