ಆ್ಯಂಡಿ ಮುರ್ರೆ 
ಕ್ರೀಡೆ

ಟೆನ್ನಿಸ್ ಲೋಕಕ್ಕೆ ಆ್ಯಂಡಿ ಮುರ್ರೆ ಗುಡ್ ಬೈ!

ಟೆನ್ನಿಸ್ ಲೋಕದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಆ್ಯಂಡಿ ಮುರ್ರೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ

ಗ್ಲಾಸ್‍ಗೋವ್(ಬ್ರಿಟನ್),ಟೆನ್ನಿಸ್ ಲೋಕದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಆ್ಯಂಡಿ ಮುರ್ರೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 31 ವರ್ಷ ವಯಸ್ಸಿನ ಮುರ್ರೆ 2019ರ ಆಸ್ಟ್ರೇಲಿಯನ್ ಓಪನ್ ಅವರ ಕೊನೆಯ ಪಂದ್ಯಾವಳಿಯೆಂದು ಹೇಳಿದ್ದಾರೆ.
ಮಾಜಿ ವಿಶ್ವ ನಂ 1 ಆ್ಯಂಡಿ ಮುರ್ರೆ ಪೃಷ್ಟ (ಹಿಪ್) ನೋವಿನಿಂದ ಬಳಲುತ್ತಿದ್ದು ಇದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಇದೇ ಮಾಸಾಂತ್ಯದಲ್ಲಿ ನಡೆಯುವ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಂ ಪಂದ್ಯಾವಳಿಯಲ್ಲಿ ಅವರು ಕಡೆಯ ಬಾರಿಗೆ ಟೆನ್ನಿಸ್ ಅಂಕಣಕ್ಕೆ ಇಳಿಯಲಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ನೋವಿನಿಂದಲೇ ಹೇಳಿಕೊಂಡಿರುವ ಮರ್ರೆ "ನಾನು ಆಸ್ಟ್ರೇಲಿಯಾದಲ್ಲಿ ಆಡಲಿದ್ದೇನೆ.ನಾನೀಗಲೂ ಒಂದು ಮಟ್ಟದಲ್ಲಿ ಆಡಬಲ್ಲವನಾಗಿದ್ದೇನೆ. ಆದ್ರೆ ನಾನು ಸಂತಸಪಡಬಹುದಾದ ಮಟ್ಟದಲ್ಲಲ್ಲ." ಎಂದಿದ್ದಾರೆ.
77 ವರ್ಷದ ಬಳಿಕ ವಿಂಬಲ್ಡನ್ ಪ್ರಶಸ್ತಿ ಗಳಿಸಿದ್ದ ಬ್ರಿಟನ್ ಆಟಗಾರ ಮುರ್ರೆ ತಾವು ಟೆನ್ನಿಸ್ ಅಂಕಣದಲ್ಲಿ ಆಡಿದ ಪ್ರತಿ ಕ್ಷಣವೂ ಅಮೂಲ್ಯವಾಗಿದ್ದಾಗಿತ್ತು ಎಂದಿದ್ದು ಎಂದರು. 
ಮೂರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗಳಿಸಿಕೊಂಡಿರುವ ಮುರ್ರೆ ಟೆನ್ನಿಸ್ ಲೋಕದ ಅಗ್ರಜರಾದ ರೋಜರ್ ಫೆಡರರ್, ನೊವಾಕ್ ಡಿಕೊವಿಚ್, ರೆಫೆಲ್ ನಡಾಲ್ ಅವರಂತಹವರ ಸಾಲಿನಲ್ಲಿ ನಿಲ್ಲಬಲ್ಲವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ