ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಒಡತಿ ಸಂಜಿತಾ ಚಾನು ಮೇಲಿನ ನಿಷೇಧ ತೆರವು

Raghavendra Adiga
ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದ ಕುಮಕ್‍ಚಮ್ ಸಂಜಿತಾ ಚಾನು ಮೇಲಿನ ನಿಷೇಧವನ್ನು ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯೂಎಫ್) ಬುಧವಾರ ಹಿಂಪಡೆದಿದೆ.
ಈ ಕುರಿತಂತೆ  ಭಾರತ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯೂಎಲ್‍ಎಫ್) ಮತ್ತು ಸಂಜಿತಾ ಅವರಿಗೆ ಐಡಬ್ಲ್ಯೂಎಫ್ ಮಾಹಿತಿ ಒದಗಿಸಿದೆ.
"ಈ ಮೂಲಕ ಹೇಳುವುದೆಂದರೆ ಕುಮಕ್‍ಚಮ್ ಸಂಜಿತಾ ಚಾನು ಅವರ ಮೇಲಿನ ನಿಷೇಧವನ್ನು ಇಂದಿನಿಂದ (22 ಜನವರಿ) ರದ್ದುಗೊಳಿಸಲಾಗಿದೆ" ಐಡಬ್ಲ್ಯೂಎಫ್ ಕಾನೂನು ಕೌನ್ಸೆಲ್ ಇವಾ ನೈರ್ಫಾ ಪತ್ರವೊಂದರಲ್ಲಿ ತಿಳಿಸಿದ್ದಾರೆ.
2018ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸಂಜಿತಾ ಚಾನು ಚಿನ್ನದ ಪದಕ ವಿಜೇತರಾಗಿದ್ದರು.ಆದರೆ ಅವರು ಉದ್ದೀಪನಾ ಮದ್ದು ಸೇವನೆ ಮಾಡಿರುವುದು ಪತ್ತೆಯಾದ ಬಳಿಕ ವಿಶ್ವ ಚಾಂಪಿಯನ್ ಶಿಪ್ ಗೆ ಕೆಲವೇ ದಿನಗಳಿರುವಾಗ ಅವರ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು.
25 ವರ್ಷ ವಯಸ್ಸಿ ಭಾರತೀಯ ಮಹಿಳಾ ಲಿಫ್ಟರ್ ಕಳೆದ ಮೇನಿಂದ ತಾತ್ಕಾಲಿಕ ನಿಷೇಧಕ್ಕೆ ಒಳಗಾಇದ್ದರು. 
SCROLL FOR NEXT