ಡರರ್-ನಡಾಲ್ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ 
ಕ್ರೀಡೆ

ವಿಂಬಲ್ಡನ್‌ನಲ್ಲಿ ನಾಳೆ ಬಹುನಿರೀಕ್ಷಿತ ಪಂದ್ಯ: ಫೆಡರರ್-ನಡಾಲ್ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ

ಕಳೆದ 11 ವರ್ಷಗಳ ಬಳಿಕ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಇಬ್ಬರು ಸ್ಟಾರ್‌ ಆಟಗಾರರಾದ ಸ್ವಿಜರ್‌ಲೆಂಡ್‌ ರೋಜರ್‌ ಫೆಡರರ್‌ ಹಾಗೂ ರಫೆಲ್‌ ನಡಾಲ್‌ ನಾಳೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಲಂಡನ್‌: ಕಳೆದ 11 ವರ್ಷಗಳ ಬಳಿಕ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಇಬ್ಬರು ಸ್ಟಾರ್‌ ಆಟಗಾರರಾದ ಸ್ವಿಜರ್‌ಲೆಂಡ್‌ ರೋಜರ್‌ ಫೆಡರರ್‌ ಹಾಗೂ ರಫೆಲ್‌ ನಡಾಲ್‌ ನಾಳೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.
ಬುಧವಾರ ಇಲ್ಲಿ ನಡೆದಿದ್ದ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ಇಬ್ಬರೂ ಪ್ರತ್ಯೇಕ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿದ್ದಾರೆ. ವಿಶ್ವದ ಶ್ರೇಷ್ಠ ಆಟಗಾರರ ಪಂದ್ಯವನ್ನು ಕಣ್ತುಂಬಿಕೊಳ್ಳಲು ಟೆನಿಸ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಅದ್ಭುತ ಪ್ರದರ್ಶನ ತೋರಿದ್ದ ನಡಾಲ್‌, ಅಮೆರಿಕದ ಸ್ಯಾಮ್‌ ಕ್ವಾರ್ರಿ ವಿರುದ್ಧ 7-5,6-2, 6-2 ಅಂತರದಲ್ಲಿ ಗೆದ್ದು ಉಪಾಂತ್ಯಕ್ಕೆ ಪ್ರವೇಶ ಮಾಡಿದರು. ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ರೋಜರ್‌ ಫೆಡೆರರ್‌ ಅವರು 4-6, 6-1, 6-4, 6-4 ಅಂತರದಲ್ಲಿ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶ ಮಾಡಿದ್ದಾರೆ. 
ಶುಕ್ರವಾರದ ಪಂದ್ಯವು ಫೆಡರರ್ ಮತ್ತು ನಡಾಲ್ ಅವರ 40ನೇ ಮುಖಾಮುಖಿಯಾಗಲಿದೆ.ಮತ್ತು ಇದು 2008 ರ ಫೈನಲ್ ಪಂದ್ಯದ ನಂತರ ವಿಂಬಲ್ಡನ್‌ನಲ್ಲಿ ಅವರ ಮೊದಲ ಪಂದ್ಯವಾಗಿದೆ, ಇದು ಟೆನಿಸ್‌ನ ಶ್ರೇಷ್ಠ ಪಂದ್ಯವಾಗಿ ಹೊರಹೊಮ್ಮಲಿರುವ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!