ಕ್ರೀಡೆ

ವಿಂಬಲ್ಡನ್ ಫೈನಲ್: ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಾಗಿ ಫೆಡರರ್ - ಜೊಕೊವಿಚ್ ಹಣಾಹಣಿ

Lingaraj Badiger
ಲಂಡನ್: ವಿಶ್ವದ ನಂಬರ್ 1 ಆಟಗಾರ ಸರ್ಬಿಯಾದ ನೋವಾಕ್ ಜೊಕೊವಿಚ್ ಅವರು ವರ್ಷದ ಮೂರನೇ ಗ್ರ್ಯಾನ್ ಸ್ಲ್ಯಾಮ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಆರನೇ ಬಾರಿ ವಿಂಬಲ್ಡನ್ ಟೂರ್ನಿಯ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ಜೊಕೊವಿಚ್ ಅವರು 6-2, 4-6, 6-3, 6-2 ರಿಂದ 23ನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ರಾಬರ್ಟ್ ಬೌಟಿಸ್ಟಾ ಅಗುಟ್ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು. 
ಮತ್ತೊಂದು ಸೆಮಿಫೈನಲ್ ಮುಖಾಮುಖಿಯಲ್ಲಿ ಎಂಟು ಬಾರಿಯ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. 
ಪುರುಷ ಸಿಂಗಲ್ಸ್ ವಿಭಾಗದಲ್ಲಿ ನಡೆದ ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ನಂ.3 ರ‍್ಯಾಂಕ್‌ನ ಫೆಡರರ್, ತಮ್ಮ ಬದ್ಧ ವೈರಿ ವಿಶ್ವ ನಂ.2 ರ‍್ಯಾಂಕ್‌ನ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ 7-6 (7-3), 1-6, 6-3, 6-4ರ ಅಂತರದ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 
37ರ ಹರೆಯದ ಫೆಡರರ್ ಅವರು 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಾಗಿ ಅಗ್ರ ಶ್ರೇಯಾಂಕಿತ ಸೆರ್ಬಿಯಾದ ನೊವಾಕ್ ಜೊಕೊವಿಕ್ ವಿರುದ್ಧ ಹೋರಾಡಲಿದ್ದಾರೆ.
SCROLL FOR NEXT