ವಿನೇಶ್ ಫೋಗಟ್ 
ಕ್ರೀಡೆ

ಯಾಸರ್ ದೋಗು ಇಂಟರ್‌ನ್ಯಾಷನಲ್‌ ಕುಸ್ತಿ: ಭಾರತದ ವಿನೇಶ್ ಫೋಗಟ್ ಗೆ ಸ್ವರ್ಣ ಪದಕ

ಇಲ್ಲಿನ ಯಾಸರ್ ದೋಗು ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಚಿನ್ನದ ಪದಕ ಗಳಿಸಿದ್ದಾರೆ.

ಇಸ್ತಾಂಬುಲ್: ಇಲ್ಲಿನ ಯಾಸರ್ ದೋಗು ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಭಾರತದ  ಕುಸ್ತಿಪಟು ವಿನೇಶ್ ಫೋಗಟ್ ಚಿನ್ನದ ಪದಕ ಗಳಿಸಿದ್ದಾರೆ.
ಅಂತಿಮ ಪಂದ್ಯದಲ್ಲಿ ಪೋಗಟ್  ರಷ್ಯಾದ ಎದುರಾಳಿ ಎಕಟೆರಿನಾ ಪೋಲೆಶ್‌ಚುಕ್ ಅವರನ್ನು ಅವರನ್ನು 9-5ರಿಂದ ಸೋಲಿಸಿ ಚಿನ್ನದ ಪದಕ ಗೆದ್ದರು
ಇದಕ್ಕೆ ಮುನ್ನವೇ ಸ್ಪೇನ್ ನಲ್ಲಿ ನಡೆದಿದ್ದ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿಯೂ ವಿನೇಶ್ ಅಗ್ರಸ್ಥಾನ ಪಡೆದು ಸಾಧನೆ ಮಾಡಿದ್ದರು.
ಇದೊಂದು ಕುಸ್ತಿ ಒಕ್ಕೂಟದ ರ್ಯಾಂಕಿಂಗ್  ಸರಣಿ ಕ್ರೀಡಾಕೂಟವಾಗಿದ್ದು ವಿನೇಶ್ ಮಾತ್ರವಲ್ಲದೆ ಭಾರತೀಯರಾದ ಸೀಮಾ (50 ಕೆಜಿ) ಮತ್ತು ಮಂಜು (59 ಕೆಜಿ) ಅವರೂ ಸಹ ಅವರವರ ವಿಭಾಗದಲ್ಲಿ ಬಂಗಾರದ ಪದಕ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್